ರೇಣುಕಾಸ್ವಾಮಿ ಕೊಲೆ ಪ್ರಕರಣ | ಬ್ಯಾರಕ್ ಬದಲಾವಣೆಗೆ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಆದೇಶ ಅ.23ಕ್ಕೆ ಮುಂದೂಡಿಕೆ
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಬ್ಯಾರಕ್ ಬದಲಾವಣೆಗೆ ಸಂಬಂಧಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರವಾಗಿ ಆದೇಶವನ್ನು ಅಕ್ಟೋಬರ್ 23ಕ್ಕೆ ನ್ಯಾಯಾಲಯ ಮುಂದೂಡಿದೆ.
ಇದರ ಜೊತೆಗೆ ಪ್ರಕರಣದ ಆರೋಪಿಗಳಾದ ಅನುಕುಮಾರ್ ಮತ್ತು ಜಗದೀಶ್ ಜಾಮೀನು ಅರ್ಜಿಗಳ ಅದೇಶವನ್ನು ಅಕ್ಟೋಬರ್ 23ಕ್ಕೆ 59 ಸಿಸಿಎಚ್ ನ್ಯಾಯಾಲಯ ಮುಂದೂಡಿದೆ.
ಇದಲ್ಲದೇ ನ್ಯಾಯಾಧೀಶರು ಪರಪ್ಪನ ಆಗ್ರಹಾರಕ್ಕೆ ಭೇಟಿ ನೀಡಿ ಖುದ್ದು ಪರಿಶೀಲಿಸಬೇಕು ಎಂದು ಸಲ್ಲಿಸಿದ್ದ ಪವಿತ್ರಾ ಗೌಡ ಸಲ್ಲಿಸಿದ್ದ ವಿಶೇಷ ಅರ್ಜಿ ಸಂಬಂಧಿಸಿದ ಆದೇಶವನ್ನೂ ಅಕ್ಟೋಬರ್ 23ರಂದು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.
ತಾನಿರುವ ಬ್ಯಾರಕ್ ನಲ್ಲಿ ತನಗೆ ನೈಜೀರಿಯಾ ಖೈದಿಗಳಿಂದ ಪ್ರಾಣಾಪಾಯ ಇದೆ ಹೀಗಾಗಿ ಬ್ಯಾರಕ್ ಬದಲಾಯಿಸಬೇಕು ಎಂದು ಪವಿತ್ರಾಗೌಡ ಹಲವು ಬಾರಿ ವಿಚಾರಣೆ ವೇಳೆ ಕಣ್ಣೀರು ಹಾಕಿದ್ದರು. ಈ ಸಂಬಂಧ ಅರ್ಜಿ ಸಲ್ಲಿಸಲು ಸೂಚಿಸಿದ್ದ ನ್ಯಾಯಾಲಯ ಈಗ ಅರ್ಜಿಯ ವಿಚಾರಣೆ ಮುಗಿಸಿದ್ದು ಆದೇಶ ಕಾಯ್ದಿರಿಸಿದೆ.