×
Ad

‘ವಕ್ಫ್ ಬೋರ್ಡ್’ಗೆ ಝಮೀರ್ ಅಹ್ಮದ್ ಆಸ್ತಿ ಬರೆಸಿಕೊಡಿ : ಆರ್.ಅಶೋಕ್

Update: 2024-10-31 19:32 IST

ಬೆಂಗಳೂರು : ‘ರೈತರ ಭೂಮಿಗೆ ಕನ್ನ ಹಾಕಿದ್ದಾಯ್ತು, ದೇವಾಲಯಗಳ ಆಸ್ತಿ ಮೇಲೆ ದಬ್ಬಾಳಿಕೆ ಮಾಡಿದ್ದಾಯ್ತು, ಈಗ ವಕ್ಫ್ ಬೋರ್ಡ್ ಹೆಸರಿನಲ್ಲಿ ಹಿಂದೂಗಳ ಸ್ಮಶನವನ್ನೂ ಕಬಳಿಸಲು ಹೊರಟಿದೆ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರಕಾರ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸಿಎಂ ಸಿದ್ದರಾಮಯ್ಯನವರೇ, ಹಿಂದೂಗಳೆಂದರೆ ನಿಮ್ಮ ಸರಕಾರಕ್ಕೆ ಯಾಕಿಷ್ಟು ದ್ವೇಷ? ವಕ್ಫ್ ಬೋರ್ಡ್‍ಗೆ ಬೇಕಾದರೆ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಆಸ್ತಿ ಬರೆಸಿಕೊಡಿ, ನಿಮ್ಮದೂ ಕೊಡಿ, ನಿಮ್ಮ ಸಚಿವರು, ಶಾಸಕರದ್ದೂ ಕೊಡಿಸಿ. ಆದರೆ ಜನ ಸಾಮಾನ್ಯರ ಮೇಲೆ ಯಾಕಿಷ್ಟು ದಬ್ಬಾಳಿಕೆ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ.

‘ಬ್ರದರ್ಸ್ ಮೇಲಿರುವ ಪ್ರೀತಿಗೆ ಹಿಂದೂಗಳಿಗೆ ಯಾಕೆ ತೊಂದರೆ ಕೊಡುತ್ತೀರಿ?. ವಕ್ಫ್ ಮಂಡಳಿ ನೆಪದಲ್ಲಿ ಲ್ಯಾಂಡ್ ಜಿಹಾದ್‍ಗೆ ಕಾಂಗ್ರೆಸ್ ಸರಕಾರದ ಸಂಪೂರ್ಣ ಸಹಕಾರ ಇರಲಿದೆ ಎಂದು ಮುಸ್ಲಿಮರಿಗೆ ಪ್ರತ್ಯೇಕವಾಗಿ ಆರನೇ ಗ್ಯಾರೆಂಟಿ ಏನಾದರೂ ಕೊಟ್ಟಿದ್ದೀರಾ?’ ಎಂದು ಆರ್.ಅಶೋಕ್ ಕೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News