ನ್ಯಾಯಮೂರ್ತಿ ಜಿ.ನರೇಂದರ್ ರನ್ನು ಆಂಧ್ರ ಹೈಕೋರ್ಟ್‍ಗೆ ವರ್ಗಾಯಿಸಲು ಶಿಫಾರಸು
Update: 2023-08-11 23:58 IST
ಬೆಂಗಳೂರು, ಆ.11: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಜಿ.ನರೇಂದರ್ ಅವರನ್ನು ನೆರೆಯ ಆಂಧ್ರ ಪ್ರದೇಶ ಹೈಕೋರ್ಟ್‍ಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ವರ್ಗಾವಣೆ ಮಾಡಿ ಶಿಫಾರಸ್ಸು ಮಾಡಿದೆ.
ಆ.3ರ ನಿರ್ಧಾರದ ಪ್ರಕಾರ ಕೊಲಿಜಿಯಂ ನ್ಯಾ. ನರೇಂದರ್ ಅವರನ್ನು ಒಡಿಶಾ ಹೈಕೋರ್ಟ್‍ಗೆ ವರ್ಗಾಯಿಸಿತ್ತು. ಆದರೆ, ನ್ಯಾ. ನರೇಂದರ್ ಅವರು ತಮ್ಮನ್ನು ನೆರೆಯ ರಾಜ್ಯಗಳಾದ ತೆಲಂಗಾಣ, ತಮಿಳುನಾಡು ಅಥವಾ ಆಂಧ್ರ ಪ್ರದೇಶಕ್ಕೆ ವರ್ಗಾಯಿಸುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ನೆರೆಯ ರಾಜ್ಯಗಳಲ್ಲಿ ಒಂದಾದ ಆಂಧ್ರಪ್ರದೇಶಕ್ಕೆ ವರ್ಗಾಯಿಸಿದೆ.
ಈ ಮೂಲಕ ಆ.3ರಂದು ಒಡಿಶಾ ಹೈಕೋರ್ಟ್‍ಗೆ ನ್ಯಾ.ನರೇಂದರ್‍ರನ್ನು ವರ್ಗಾಯಿಸಿದ್ದ ನಿರ್ಣಯದಲ್ಲಿ ಬದಲಾಯಿಸಿ ಅವರನ್ನು ಆಂಧ್ರಪ್ರದೇಶಕ್ಕೆ ವರ್ಗಾಯಿಸುವ ಮೂಲಕ ನಿರ್ಣಯದಲ್ಲಿ ಮಾರ್ಪಾಡು ಮಾಡಿದೆ.