×
Ad

ಪಿಜಿಗಳಲ್ಲಿ ಮೊಬೈಲ್ ಫೋನ್‍, ಲ್ಯಾಪ್‍ಟಾಪ್‍ ಕಳ್ಳತನ: ಆರೋಪಿಗಳ ಬಂಧನ

Update: 2023-11-07 17:24 IST

ಚಿತ್ರ -  twitter@BlrCityPolice 

ಬೆಂಗಳೂರು, ನ.7: ಪಿಜಿ, ಬ್ಯಾಚುಲರ್ಸ್ ರೂಮ್‍ಗಳಲ್ಲಿ ಮೊಬೈಲ್ ಫೋನ್‍ಗಳು, ಲ್ಯಾಪ್‍ಟಾಪ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಇಲ್ಲಿನ ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ಕಳ್ಳತನ ಮಾಡುತ್ತಿದ್ದ ಶ್ರೀನಾಥ್, ಆತನಿಂದ ಕಡಿಮೆ ಬೆಲೆಗೆ ಖರೀದಿಸುತ್ತಿದ್ದ ಸೆಲ್ವನ್ ಹಾಗೂ ಮಂಜು ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 75 ಲಕ್ಷ ರೂ. ಮೌಲ್ಯದ ಲ್ಯಾಪ್‍ಟಾಪ್‍ಗಳು, ಮೊಬೈಲ್ ಫೋನ್‍ಗಳು ಹಾಗೂ ಟ್ಯಾಬ್ಲೆಟ್‍ಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಮುಖ ಆರೋಪಿಯಾಗಿರುವ ಶ್ರೀನಾಥ್ 2019ರಲ್ಲಿ ಆರ್‍ಎಂಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಲ್ಯಾಪ್‍ಟಾಪ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಬೆಂಗಳೂರು ನಗರದ ವಿವಿಧೆಡೆ ಬೆಳಗಿನಜಾವ ಪಿಜಿ, ಬ್ಯಾಚುಲರ್ಸ್ ರೂಮ್‍ಗಳ ಬಳಿ ಹೋಗುತ್ತಿದ್ದ ಆರೋಪಿ ಲ್ಯಾಪ್‍ಟಾಪ್, ಮೊಬೈಲ್ ಫೋನ್‍ಗಳನ್ನು ಕದ್ದು ಪರಾರಿ ಆಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News