×
Ad

ಸ್ವಾತಂತ್ರ್ಯ ಹೋರಾಟಕ್ಕೆ ಜೀವ ತುಂಬಿದ ಹಾಡನ್ನು ದೇಶ ವಿಭಜಿಸಲು ಬಳಸಲಾಗುತ್ತಿದೆ: ನಟ ಕಿಶೋರ್ ಕುಮಾರ್

Update: 2025-12-11 20:10 IST

ಬೆಂಗಳೂರು: ಸ್ವಾತಂತ್ರ್ಯ ಹೋರಾಟಕ್ಕೆ ಜೀವ ತುಂಬಿದ ಮತ್ತು ಭಾರತದಾದ್ಯಂತ ಜನರನ್ನು ಒಗ್ಗೂಡಿಸಿದ(ವಂದೇ ಮಾತರಂ) ಹಾಡನ್ನು ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು, ತಮ್ಮ ರಾಜಕೀಯ ಲಾಭಕ್ಕೆ ಬಳಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಟ ಕಿಶೋರ್ ಕುಮಾರ್ ಖಂಡಿಸಿದ್ದಾರೆ.

ಗುರುವಾರ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ‘ಲೋಕಸಭೆಯ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯ ಚಿತ್ರ’ವನ್ನು ‘ಜೈ ಶ್ರೀರಾಮ್ ನಿಂದ ವಂದೇ ಮಾತರಂವರೆಗೆ’ ಎಂದು ಶೀರ್ಷಿಕೆ ನೀಡಿ, ಅವರು ಪೋಸ್ಟ್ ಮಾಡಿದ್ದಾರೆ.

ಇತರರನ್ನು ಪ್ರೀತಿಯಿಂದ ಸ್ವಾಗತಿಸಲು ಬಳಸುತ್ತಿದ್ದ ಅಭಿವ್ಯಕ್ತಿಯನ್ನು ಹೇಗೆ ಸ್ವಾಧೀನಪಡಿಸಿಕೊಂಡು ಅದನ್ನು ಯುದ್ಧಘೋಷವಾಗಿ, ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ, ಅಧಿಕಾರ ಹಿಡಿಯುವ ಸುಲಭ ಸಾಧನವಾಗಿ ಪರಿವರ್ತಿಸಲಾಗಿದೆಯೋ, ಹಾಗೆಯೇ, ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರವಿಲ್ಲದ, ನಿಜವಾದ ದೇಶಭಕ್ತರು ನಿರ್ಮಿಸಿದ ಎಲ್ಲವನ್ನೂ ಮಾರುತ್ತಿರುವ ಅಧಿಕಾರದಲ್ಲಿರುವ ನಿಷ್ಪ್ರಯೋಜಕ ಜನರು, ಈಗ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬಳಸಿದ ಹಾಡನ್ನು ರಾಜಕೀಯ ಲಾಭಕ್ಕೆ ಬಳಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಕುಸಿಯುತ್ತಿರುವ ರೂಪಾಯಿ ಮೌಲ್ಯ, ಆರ್ಥಿಕತೆ ಮತ್ತು ಕುಸಿಯುತ್ತಿರುವ ಪ್ರಜಾಪ್ರಭುತ್ವದ ಸಂಸ್ಥೆಗಳು, ನಕಲಿ ಜಿಡಿಪಿ ಮತ್ತು ರೈತರಿಗೆ ನೀಡಿದ ನಕಲಿ ಭರವಸೆಗಳು, ಆರೋಗ್ಯ ಮತ್ತು ನಿರುದ್ಯೋಗ, ಅಮೆರಿಕ ಮತ್ತು ಚೀನಾ, ಮಣಿಪುರ ಮತ್ತು ಲಡಾಖ್, ವಿಜ್ಞಾನಿಗಳು ಮತ್ತು ವಿದ್ವಾಂಸರ ಅಕ್ರಮ ಬಂಧನಗಳು ಮುಂತಾದ ಎಲ್ಲ ಅಗತ್ಯ ಮತ್ತು ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಹೊತ್ತಿಗೆ ಈ ಮೂರ್ಖರಿಂದ ಏನನ್ನೂ ನಿಭಾಯಿಸಲು ಸಾಧ್ಯವಿಲ್ಲವೆಂದು ನಾವು ಅರ್ಥಮಾಡಿಕೊಂಡಿರಬೇಕಿತ್ತು. ಅವರು ಮಾಡಬಹುದಾದದ್ದು ಇಷ್ಟೇ ‘ವಿಭಜಿಸು ಇಲ್ಲ, ದಿಕ್ಕು ತಪ್ಪಿಸು’ ಎಂದು ನಟ ಕಿಶೋರ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News