×
Ad

ವಿಜಯನಗರದಲ್ಲಿ ಕಾರು ಅಪಘಾತ; ಕಲಬುರಗಿ ಡಿಸಿಆರ್‌‍ಇ ಘಟಕದ ಎಸ್ಪಿಗೆ ಗಾಯ

Update: 2023-08-23 11:32 IST

ವಿಜಯನಗರ: ಅಪರಿಚಿತ ವಾನಹಕ್ಕೆ ಕಾರು ಢಿಕ್ಕಿಯಾಗಿ ಕಲಬುರಗಿ ಎಸ್ಪಿ ಹಾಗೂ ಅವರ ಕಾರಿನ ಚಾಲಕ ತೀವ್ರವಾಗಿ ಗಾಯಗೊಂಡ ಘಟನೆ ಕೂಡ್ಲಿಗಿ ತಾಲೂಕಿನ ಅಮಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಕಲಬುರಗಿಯಲ್ಲಿ ಡಿಸಿಆರ್‌‍ಇ ಘಟಕದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವವಹಿಸುತ್ತಿರುವ ಸಂಗೀತಾ ಹಾಗೂ ಕಾರಿನ ಚಾಲಕ ದೀಪಕ್ ತೀವ್ರವಾಗಿ ಗಾಯಗೊಂಡಿದ್ದಾರೆನ್ನಲಾಗಿದೆ.

ಸಂಗೀತಾ ತನ್ನ ಇಬ್ಬರು ಮಕ್ಕಳು ಹಾಗೂ ತಂಗಿಯೊಂದಿಗೆ ಕಲಬುರಗಿಯಿಂದ ಬೆಂಗಳೂರು ಕಡೆ ಹೊರಟಿದ್ದಾಗ ರಾತ್ರಿ 12 ಗಂಟೆ ಸಮಯದಲ್ಲಿ ಅಮಲಾಪುರ ಬಳಿ ಮುಂದೆ ಹೋಗುತ್ತಿದ್ದ ವಾಹನವೊಂದರ ಚಾಲಕ ಏಕಾಏಕಿ ತನ್ನ ಪಥ ಬದಲಾಯಿಸಿದ್ದಾನೆ. ಈ ವೇಳೆ ಹಿಂಬದಿಯಲ್ಲಿ ಬರುತ್ತಿದ್ದ ಸಂಗೀತಾ ಅವರಿದ್ದ ಕಾರು ಮುಂದೆ ಇದ್ದ ವಾಹನಕ್ಕೆ ಢಿಕ್ಕಿಯಾಗಿದೆ. ಇದರಿಂದ ಎಸ್ಪಿ ಸಂಗೀತಾ ಹಾಗೂ ಕಾರು ಚಾಲಕ ದೀಪಕ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಹೊಸಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News