ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ವೈರಲ್ ರೋಗ ಪತ್ತೆ ಹಚ್ಚಲು ನಡೆಸುವ ಪರೀಕ್ಷೆಗೆ ದರ ನಿಗದಿ
ಬೆಂಗಳೂರು : ರಾಜ್ಯ ಸರಕಾರವು ರಾಜ್ಯದಲ್ಲಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಮತ್ತು ಪ್ರಯೋಗ ಶಾಲೆಗಳಲ್ಲಿ ಕೋವಿಡ್ ಸೇರಿ ಯಾವುದೇ ರೀತಿಯ ವೈರಲ್ ಸೋಂಕುಗಳಿರುವ ರೋಗಗಳನ್ನು ಪತ್ತೆ ಹಚ್ಚಲು ನಡೆಸುವ ಇನ್‍ಫ್ಲುಯೆಂಜಾ ಪ್ಯಾನೆಲ್ ಪರೀಕ್ಷೆ ಮಾಡುವ ದರವನ್ನು 1,700 ರೂ.ಗಳಿಗೆ ನಿಗದಿಪಡಿಸಲಾಗಿದೆ.
ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳು/ ಆಸ್ಪತ್ರೆಗಳು, ಖಾಸಗಿ ಪ್ರಯೋಗಶಾಲೆಗಳು/ ಡಯಾಗೋಸ್ಟಿಕ್ ಲ್ಯಾಬೊರೇಟರಿಗಳು ಸರಕಾರ ನಿಗದಿಪಡಿಸಿದ ಇನ್‍ಫ್ಲುಯೆಂಜಾ ಪ್ಯಾನೆಲ್ ಪರೀಕ್ಷೆ ದರವನ್ನು ರೋಗಿಗಳಿಗೆ ವಿಧಿಸಬೇಕು. ಹಾಗೆಯೇ ಎಲ್ಲ ತೀವ್ರ ಉಸಿರಾಟದ ಸೋಂಕುಗಳು ಮತ್ತು ಇನ್‍ಫ್ಲುಯೆಂಜಾ ತರಹದ ಪ್ರಕರಣಗಳನ್ನು ಐಎಚ್‍ಐಪಿ ಪೋರ್ಟಲ್‍ನಲ್ಲಿ ಖಡ್ಡಾಯವಾಗಿ ದಾಖಲಿಸಬೇಕು ಎಂದು ಸರಕಾರವು ಆದೇಶಿಸಿದೆ.
ಸರಕಾರದ ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್ ಮೆಂಟ್ ಅಧಿನಿಯಮ, 2007ರ ಸೆಕ್ಷನ್ 15(1) ಮತ್ತು (2) ರಂತೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.