ಬೆಂಗಳೂರು : ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನ.30ರ ಬದಲು, ಡಿ. 2ರಿಂದ ಎಂಟು ದಿನಗಳ ಕಾಲ ನಡೆಸಲು ರಾಜ್ಯ ಸಚಿವ ಸಂಪುಟ ಆಡಳಿತ್ಮಕ ಅನುಮೋದನೆ ನೀಡಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಡಿ.2ರಿಂದ ಡಿ.11ರವರೆಗೆ ಎಂಟು ದಿನ ಅಧಿವೇಶನ ನಡೆಸುವ ಒಪ್ಪಿಗೆ ಸೂಚಿಸಲಾಗಿದೆ.

ಈ ಹಿಂದೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ನ.30ರಿಂದ ಡಿ.11ರವರೆಗೆ ಒಟ್ಟು 10 ದಿನ ಅಧಿವೇಶನ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈ ಕುರಿತ ಕಡತವನ್ನು ರಾಜ್ಯಪಾಲರ ಅನುಮೋದನೆಗಾಗಿ ಸಂಸದೀಯ ವ್ಯವಹಾರಗಳ ಇಲಾಖೆಯು ರಾಜ್ಯಪಾಲರಿಗೆ ಕಳುಹಿಸಿತ್ತು. ಆದರೆ, ಸರಕಾರದ ಸೂಚನೆ ಅನ್ವಯ ಕಡತವನ್ನು ವಾಪಸ್ ಪಡೆದುಕೊಂಡಿರುವ ಇಲಾಖೆಯು, ಡಿ.2ರಿಂದ ಅಧಿವೇಶನ ಆರಂಭಿಸುವ ಬಗ್ಗೆ ದಿನ ಮರುನಿಗದಿಪಡಿಸಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಕಡತ ರವಾನಿಸಿತ್ತು ಎಂದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor