×
Ad

ಯಾದಗಿರಿ | ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಪತಿ ಹತ್ಯೆಗೈದ ಪತ್ನಿಯ ಬಂಧನ

Update: 2023-07-24 14:50 IST

ಯಾದಗಿರಿ (ಗುರುಮಿಠಕಲ್): ಕೃಷಿ ಜಮೀನಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಮೃತರ ಪತ್ನಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

ಜೂನ್ 16 (ಶುಕ್ರವಾರ) ಗುರುಮಿಠಕಲ್ ತಾಲೂಕಿನ ಕೊಂಕಲ್ ಗ್ರಾಮದ ಹೊರವಲಯದ ಕೃಷಿ ಜಮೀನಿನಲ್ಲಿದ್ದ ಬನ್ನಿ ಗಿಡಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಪರಿಶೀಲಿಸಿದಾಗ ಕೊಂಕಲ್ ಗ್ರಾಮದ ನಿವಾಸಿ ಕಾಶಪ್ಪ ನಾಗಪ್ಪ ಮಲ್ಲಪ್ಪೋಳ (36) ಎಂದು ಗುರುತಿಸಲಾಗಿದ್ದು, ಮೃತನ ಸೋದರಿ ಕಾಶಮ್ಮ ಅವರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಅನುಮಾನ ವ್ಯಕ್ತಪಡಿಸಿ, ದೂರು ಸಲ್ಲಿಕೆ ಮಾಡಿದ್ದರು. 

ಮೃತನ ಸಹೋದರಿ ನೀಡಿದ ದೂರಿನಂತೆ ಎಸ್ಪಿ, ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಪಿಐ ನೇತೃತ್ವದಲ್ಲಿ ಪೊಲೀಸ್ ತಂಡ ತನಿಖೆ ನಡೆಸಿದ್ದು, ಮೃತ ಪತ್ನಿ ಅನಿತಾ ಅದೇ ಗ್ರಾಮದ ನಾಗೇಶ ಹತ್ತಿಕುಣಿ ಎನ್ನುವ ಯುವಕನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವ ವಿಷಯ ಬಯಲಿಗೆ ಬಂದಿದೆ. 

ಸದ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News