ಹನೂರು : ಕೃಷಿ ಹೊಂಡದಲ್ಲಿ ಇಬ್ಬರ ಮೃತದೇಹಗಳು ಪತ್ತೆ
Update: 2025-08-31 10:16 IST
ಚಾಮರಾಜನಗರ: ಕೃಷಿ ಹೊಂಡದಲ್ಲಿ ಇಬ್ಬರ ಮೃತ ದೇಹಗಳು ರವಿವಾರ ಬೆಳಗ್ಗೆ ಪತ್ತೆಯಾಗಿದ್ದು, ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ಹನೂರು ತಾಲ್ಲೂಕಿನ ಒಡೆಯರಪಾಳ್ಯ ಸಮೀಪದ ಗುಳ್ಯ ಬಯಲು ಗ್ರಾಮದ ಜಮೀನೊಂದರ ಕೃಷಿ ಹೊಂಡದಲ್ಲಿ ಮೀನಾಕ್ಷಿ (31) ಮತ್ತು ರವಿ(31) ಎಂಬುವವರ ಮೃತ ದೇಹ ದೊರೆದೆ. ಅಕ್ರಮ ಸಂಬಂಧವೇ ಸಾವಿಗೆ ಕಾರಣ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಮೃತ ದೇಹಗಳನ್ನು ಕೃಷಿ ಹೊಂಡದಿಂದ ಹೊರಕ್ಕೆ ತೆಗೆಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.