ಕಾಪು: ಎಚ್ಆರ್ ಎಸ್ ವತಿಯಿಂದ ಪ್ರಥಮ ಚಿಕಿತ್ಸೆ ಮಾಹಿತಿ ಶಿಬಿರ
ಕಾಪು: ಹುಮ್ಯಾನಿಟರೈನ್ ರಿಲೀಫ್ ಸೊಸೈಟಿ (ಎಚ್.ಆರ್.ಎಸ್.), ಕಾಪು ಶಾಖೆ ವತಿಯಿಂದ ಸರಕಾರಿ ಉರ್ದು ಸಂಯುಕ್ತ ಪ್ರೌಢಶಾಲೆ ಮಲ್ಲಾರ್ ಮತ್ತು ಮೌಲಾನ ಅಝಾದ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಾವುದೇ ಅಪಘಾತ, ಅವಘಡ ಸಂಭವಿಸಿದ ಸಮಯದಲ್ಲಿ ಪ್ರಥಮ ಚಿಕಿತ್ಸೆ ಯಾವ ರೀತಿ ಮಾಡಬಹುದೆಂಬ ಮಾಹಿತಿ ಶಿಬಿರ ಆಯೋಜಿಸಲಾಗಿತ್ತು.
ಎಚ್.ಆರ್.ಎಸ್. ತರಬೇತುದಾರ ಮುಹಮ್ಮದ್ ಸಲೀಂ ಮಲ್ಪೆ ಮಾಹಿತಿ ನೀಡಿದರು.
ಎಚ್.ಆರ್.ಎಸ್. ಮಾನವೀಯ ಸಹಕಾರಿ ಸಂಘಟನೆ ಆಗಿದ್ದು, ಇದು ಪ್ರಾಕೃತಿಕ ಅಥವಾ ಮಾನವ ವತಿಯಿಂದ ನಡೆಯುವ ದುರಂತಗಳ ಸಂದರ್ಭ ಆ ಪ್ರದೇಶಕ್ಕೆ ತೆರಳಿ ನಿಸ್ವಾರ್ಥವಾಗಿ ಜನರಿಗೆ ನೆರವಾಗುತ್ತದೆ. ಈ ಸಂಸ್ಥೆಯು ಕರ್ನಾಟಕದಲ್ಲಿ 2024ರಿಂದ ಕಾರ್ಯನಿರ್ವಹಿಸುತ್ತಿದ್ದು, ಉಡುಪಿಯಲ್ಲಿ ಈ ಸಂಸ್ಥೆಯು ಒಂದು ಆಂಬುಲೆನ್ಸ್ ಹೊಂದಿದೆ ಎಂದು ಮಾಜಿ ತ್ರಿ ಜಿಲ್ಲಾ ಸಂಚಾಲಕ ಅನ್ವರ್ ಅಲಿ ಕಾಪು ಹೇಳಿದ್ದಾರೆ.
ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಬಿಲಾಲ್ ಮಲ್ಪೆ, ತರಬೇತುದಾರ ಝುಬೇರ್ ಮಲ್ಪೆ, ಪುರಸಭೆ ಸದಸ್ಯ ನೂರುದ್ದೀನ್, ಉರ್ದು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜೋಯ್ಸಾ, ಮೌಲಾನ ಆಝಾದ್ ನ ಸಹಾಯಕ ಮುಖ್ಯೋಪಾಧ್ಯಾಯಿನಿ ನಿಹಾ, ಮುಹಮ್ಮದ್ ಫಾರೂಕ್, ಕಲೀಮುಲ್ಲಾ, ಶೇಕ್ ಸನಾವರ್ ಉಪಸ್ಥಿತರಿದ್ದರು.
ಕಾಪು ಘಟಕದ ಗ್ರೂಪ್ ಮುಖಂಡ ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.
ಅಬ್ದುಲ್ ಜಲೀಲ್ ವಂದಿಸಿದರು.