ಎಂಎಸ್ಸಿ ಪರೀಕ್ಷೆಯಲ್ಲಿ ಅಭಿಜ್ಞಾಗೆ ಪ್ರಥಮ ರ‍್ಯಾಂಕ್
Update: 2026-03-07 20:58 IST
ಉಡುಪಿ, ಮಾ.7: ಉಡುಪಿಯ ಎಂ.ಜಿ.ಎಂ ಕಾಲೇಜಿನ 2023-25ನೇ ಸಾಲಿನ ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ ಅಭಿಜ್ಞಾ ಎಸ್.ಎಸ್. 9.26 ಸಿಜಿಪಿಎ(ಶೇ.90.34) ಅಂಕಗಳೊಂದಿಗೆ ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಇವರು ಪರ್ಕಳ - ಹೆರ್ಗದ ಲೋಲಾಕ್ಷಿ ಎಸ್. ಮತ್ತು ಸೀತಾರಾಮ ಶೆಟ್ಟಿರ್ಗಾ ದಂಪತಿಯ ಸುಪುತ್ರಿಯಾಗಿದ್ದು ಪ್ರಸ್ತುತ ವ್ಯಾಸಂಗ ಮಾಡಿದ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನವನ್ನು ನಡೆಸುತ್ತಿದ್ದಾರೆ.