×
Ad

‘ಅನ್ವೇಷಣಾ’ ರಾಷ್ಟ್ರ ಮಟ್ಟದ ಸಂಶೋಧನಾ ವಿಚಾರ ಸಂಕಿರಣ

Update: 2026-03-07 20:48 IST

ಉಡುಪಿ, ಮಾ.7: ಉದ್ಯಾವರದ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಮಾ.6ರಂದು ಒಂದು ದಿನದ ರಾಷ್ಟ್ರಮಟ್ಟದ ಸಂಶೋಧನಾ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ಅಧೀಕ್ಷಕ ಡಾ.ಲಕ್ಷ್ಮೀನಾರಾಯಣ ಶೆಣೈ ಮಾತನಾಡಿ, ಪ್ರಕೃತಿಯ ಪರಿ ವೀಕ್ಷಣೆಯೇ ಎಲ್ಲಾ ಸಂಶೋಧನೆಗಳ ಮೂಲ ಹಾಗೂ ಕೃತಕ ಬುದ್ಧಿಮತ್ತೆಯ ಪ್ರಾಮಾಣಿಕತೆಯ ಪರಿಶೀಲನೆ ಚರ್ಚಾಸ್ಪದವಾಗಿದೆ ಎಂದು ಹೇಳಿದರು.

ಮೈಸೂರಿನ ರಾಷ್ಟ್ರೀಯ ಎಂಜಿನಿಯರಿಂಗ್ ಸಂಸ್ಥೆಯ ಪ್ರಾಧ್ಯಾಪಕ ಡಾ. ಶ್ರೀನಾಥ್ ರಾಮ್ ಪುರೆ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ವಹಿಸಿದ್ದರು. ಸಮ್ಮೇಳನದ ಮುಖ್ಯ ಸಂಘಟಕ ಡಾ.ಅಶೋಕ್ ಕುಮಾರ್ ಬಿ.ಎನ್. ಸ್ವಾಗತಿಸಿದರು. ಸಂಸ್ಥೆಯ ಬಾಲರೋಗ ವಿಭಾಗದ ಸಹ ಪ್ರಾಧ್ಯಾಪಕ ಸಹನಾ ಶಂಕರಿ ವಂದಿಸಿದರು, ಸಹಾಯಕ ಪ್ರಾಧ್ಯಾಪಕ ಡಾ.ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

ಮಣಿಪಾಲದ ಮುನಿಯಾಲ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಸತ್ಯನಾರಾಯಣ ಭಟ್, ಕ್ಲಿನಿಕಲ್ ಸ್ಟಡಿ ಡಿಸೈನ್ ವಿಷಯವಾಗಿ ಉಪನ್ಯಾಸ ನೀಡಿದರು. ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ಅಧೀಕ್ಷಕ ಡಾ.ಲಕ್ಷ್ಮೀನಾರಾಯಣ ಶೆಣೈ ಬಯೋ ಸ್ಟ್ಯಾಟಿಸ್ಟಿಕ್ಸ್ ಇನ್ ಆಯುರ್ವೇದ ವಿಷಯವನ್ನು ಕುರಿತು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಹಾಸನ ಎಸ್‌ಡಿಎಂ ಆಯುರ್ವೇದ ಕಾಲೇಜಿನ ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ್ ಎಲ್.ಹೆಗ್ಡೆ, ಸಂಸ್ಥೆಯ ಅಗದತಂತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ರವಿಕೃಷ್ಣ ಎಸ್. ಹಾಗೂ ಇಂಟೆಗ್ರೇಟೆಡ್ ಹೆಲ್ತ್ ಆಂಡ್ ಟ್ರಾನ್ಸಿಷನಲ್ ರಿಸರ್ಚ್ ವಿಭಾಗದ ಮುಖ್ಯಸ್ಥ ಡಾ.ಸಂದೇಶ್ ಕುಮಾರ್ ಉಪನ್ಯಾಸ ನೀಡಿದರು.

ಸಮಾರೋಪ ಸಮಾರಂಭ: ಸಂಕಿರಣದ ಉಪನ್ಯಾಸಗಳ ಮೇಲ್ವಿಚಾರಕ ಡಾ.ನವೀನ್ ಚಂದ್ರ ಎನ್.ಎಚ್. ಸಮ್ಮೇಳನದ ಸಾರಾಂಶವನ್ನು ವಿವರಿಸಿ ದರು. ಕಾರ್ಯಕ್ರಮದ ಮುಖ್ಯ ರೂವಾರಿ ಡಾ.ಲಕ್ಷ್ಮೀನಾರಾಯಣ ಶೆಣೈ ಅವರನ್ನು ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಉಪಪ್ರಾಂಶುಪಾಲ ಡಾ.ನಾಗರಾಜ್ ಎಸ್. ವಹಿಸಿದ್ದರು. ವೈದ್ಯಕೀಯ ಅಧೀಕ್ಷಕ ಡಾ.ಜಯಕೃಷ್ಣ ನಾಯಕ್, ಸಮ್ಮೇಳನದ ಮುಖ್ಯ ಸಂಘಟಕ ಡಾ.ಅಶೋಕ್ ಕುಮಾರ್ ಬಿ.ಎನ್. ಉಪಸ್ಥಿತರಿದ್ದರು.

ಕಾರ್ಯಕ್ರಮದ ಉಪ ಕಾರ್ಯದರ್ಶಿ ಹಾಗೂ ಇಂಟೆಗ್ರೇಟೆಡ್ ಹೆಲ್ತ್ ಆಂಡ್ ಟ್ರಾನ್ಸಿಷನಲ್ ರಿಸರ್ಚ್ ವಿಭಾಗದ ಮುಖ್ಯಸ್ಥ ಡಾ.ಸಂದೇಶ್ ಕುಮಾರ್ ವಂದಿಸಿದರು. ಸಂಸ್ಥೆಯ ಕಾಯಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮೇಘನಾ ರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News