’ನಳ-ದಮಯಂತಿ’ ಯಕ್ಷಗಾನ ಪ್ರದರ್ಶನ
ಉಡುಪಿ, ಜ.24: ಉಡುಪಿ ಶೀರೂರು ಮಠದ ವೇದವರ್ಧನ ತೀರ್ಥ ಸ್ವಾಮೀಜಿಯ ಪ್ರಥಮ ಪರ್ಯಾಯದ ಪ್ರಯುಕ್ತ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾರಂಗ ಉಡುಪಿ ಸಂಯೋಜನೆಯಲ್ಲಿ ಶುಕ್ರವಾರ ವಿವಿಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ’ನಳ-ದಮಯಂತಿ’ ಯಕ್ಷಗಾನ ಪ್ರದರ್ಶನ ರಾಜಾಂಗಣದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ, ಹಿಲ್ಲೂರು ರಾಮಕೃಷ್ಣ ಹೆಗಡೆ, ಪರಮೇಶ್ವರ ಭಂಡಾರಿ ಕರ್ಕಿ, ಶಶಾಂಕ ಆಚಾರ್ಯ, ಶಿವಾನಂದ ಕೋಟ, ಮುಮ್ಮೇಳದಲ್ಲಿ ಬಳ್ಕೂರು ಕೃಷ್ಣ ಯಾಜಿ(ಋತುಪರ್ಣ), ಕೊಂಡದಕುಳಿ ರಾಮಚಂದ್ರ ಹೆಗಡೆ(ನಳ ಮಹಾರಾಜ), ಅಶೋಕ್ ಭಟ್ ಸಿದ್ಧಾಪುರ(ಶನಿ), ಚಪ್ಪರಮನೆ ಶ್ರೀಧರ ಹೆಗಡೆ(ಹಾಸ್ಯ) ಮೂರೂರು ಸುಬ್ರಹ್ಮಣ್ಯ ಹೆಗಡೆ(ದಮಯಂತಿ), ಮುಗ್ವಾ ಗಣೇಶ್ ನಾಯ್ಕ, ವಿನಯ್ ಬೇರೊಳ್ಳಿ, ನಿರಂಜನ ಜಾಗ್ನಳ್ಳಿ, ದೀಪಕ್ ಕುಂಕಿ ಪಾತ್ರ ನಿರ್ವಹಿಸಿದರು.
ಶೀರೂರು ಮಠದ ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ ಶೆಟ್ಟಿ ಬೈಕಾಡಿ ಸ್ವಾಗತಿಸಿದರು. ಪ್ರದರ್ಶನದ ಬಳಿಕ ಎಲ್ಲ ಕಲಾವಿದರಿಗೆ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಸ್ವಾಮೀಜಿ ಅನುಗ್ರಹ ಮಂತ್ರಾ ಕ್ಷತೆ, ಕೃಷ್ಣನ ಮೂರ್ತಿ ನೀಡಿ ಆಶೀರ್ವದಿಸಿದರು.