×
Ad

ದಂತ ವೈದ್ಯರ ದಿನಾಚರಣೆ: ಆರೋಗ್ಯ ಜಾಗೃತಿ ಕಾರ್ಯಕ್ರಮ

Update: 2026-03-09 19:53 IST

ಉಡುಪಿ, ಮಾ.9: ಭಾರತೀಯ ದಂತ ವೈದ್ಯರ ಸಂಘಟನೆ(ಐಡಿಎ)ಯ ಉಡುಪಿ ಜಿಲ್ಲಾ ಶಾಖೆಯು ಮಹಿಳಾ ದಂತ ಮಂಡಳಿ(ಡಬ್ಲ್ಯೂಡಿಸಿ)ಯ ಸಹಯೋಗದೊಂದಿಗೆ ರಾಷ್ಟ್ರೀಯ ದಂತ ವೈದ್ಯರ ದಿನ ಹಾಗೂ ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಮಾ.6ರಂದು ಉಡುಪಿಯ ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ದಂತ ವೈದ್ಯರ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಡಾ.ಸೈಯದ್ ಮೊಹಮ್ಮದ್ ಫೈಜ್, ಕಾರ್ಯದರ್ಶಿ ಡಾ.ಗೌತಮ್ ರಾವ್, ಕೋಶಾಧಿಕಾರಿ ಡಾ.ತೇಜ್ ಕಿರಣ್ ಶೆಟ್ಟಿ, ಡಬ್ಲ್ಯೂಡಿಸಿ ಪ್ರತಿನಿಧಿ ಡಾ.ವಿಭಾ ಶೆಟ್ಟಿ ಹಾಗೂ ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಪನ್ಮೂಲ ವೈದ್ಯರಾದ ಡಾ.ಗೌತಮಿ ಕೆ., ಮಹಿಳೆಯರ ಬಾಯಿಯ ಆರೋಗ್ಯ ಹಾಗೂ ಡಾ.ಅನುಶ್ರೀ ಶೆಟ್ಟಿ ರಸ್ತೆ ಸುರಕ್ಷತೆ ಜಾಗೃತಿ ಕುರಿತು ಉಪನ್ಯಾಸ ನೀಡಿದರು. ಡಾ.ಮನೋಜ್ ಕಾರ್ಯಕ್ರಮ ಸಂಯೋಜಿಸಿದರು. ಡಾ.ದಿವ್ಯ ನಿರೂಪಿಸಿದರು.

ಐಡಿಎ ಉಡುಪಿಯ ದಂತ ವೈದ್ಯರಾದ ಡಾ.ಗುರುರಾಜ, ಡಾ.ಹರ್ಷ ಜಿತ್, ಡಾ.ದೀಪ, ಡಾ.ಗರಿಮಾ, ಡಾ.ಪೂಜನ್, ಡಾ.ರಾಧಿಕಾ, ಡಾ.ಲಕ್ಷ್ಮೀ, ಡಾ.ದಿವ್ಯ ಹಾಗೂ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News