×
Ad

ತಲ್ಲೂರು: ಮಹಿಳಾ ಸಂಘದಿಂದ ತಾಯಂದಿರ ದಿನಾಚರಣೆ

Update: 2026-05-07 19:23 IST

ತಲ್ಲೂರು, ಮೇ 7: ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚ್‌ನಲ್ಲಿ ಮಹಿಳಾ ಆಯೋಗದ ಸಹಯೋಗದಲ್ಲಿ ತಾಯಂದಿರ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬೆಳಗಿನ ದಿವ್ಯ ಬಲಿಪೂಜೆಯನ್ನು ಮೂಡಬೆಳ್ಳೆ ಸೆಮಿನರಿಯ ಆಧ್ಯಾತ್ಮಿಕ ನಿರ್ದೇಶಕರಾದ ವಂ. ಸಿರಿಲ್ ಲೋಬೋ ಪ್ರಧಾನ ಯಾಜಕರಾಗಿ ನೆರವೇರಿಸಿದರು. ಚರ್ಚಿನ ಧರ್ಮಗುರು ವಂ. ಎಡ್ವಿನ್ ಡಿಸೋಜಾ ಸಹಕರಿಸಿದರು.

ಬಳಿಕ ಜಯರಾಣಿ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ತಾಯಂದಿರಿಗಾಗಿ ವಿಶೇಷ ಕಾರ್ಯಕ್ರಮ ಎರ್ಪಡಿ ಸಲಾಯಿತು. ಫಾ. ಸಿರಿಲ್ ಲೋಬೋ ಅವರು ತಾಯಂದಿರ ಬಗ್ಗೆ ಮಾತನಾಡಿದರು. ಚರ್ಚಿನ ಧರ್ಮಗುರು ವಂ. ಎಡ್ವಿನ್ ಡಿಸೋಜಾ ಸಂದೇಶ ನೀಡಿದರು. ಚರ್ಚಿನ ಧರ್ಮ ಭಗಿನಿಯರಿಗೆ, ಹಿರಿಯ ತಾಯಂದಿಯರಿಗೆ, ಗರ್ಭಿಣಿ ಮಹಿಳೆ ಯರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ಸ್ತ್ರೀ ಸಂಘಟನೆಯ ಕೇಂದ್ರೀಯ ಅಧ್ಯಕ್ಷೆ ಸಿಲ್ವಿಯಾ ಸುವಾರಿಸ್, ಪಾಲನಾ ಮಂಡಳಿಯ ಉಪಾಧ್ಯಕ್ಷ, ಕಾರ್ಯದರ್ಶಿ, ಆಯೋಗಗಳ ಸಂಯೋಜಕ ಹಾಗೂ ಧರ್ಮ ಭಗಿನಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಚರ್ಚಿನ ಸಂಘದ ಅಧ್ಯಕ್ಷೆ ವಿಲ್ಮಾ ಅಂದ್ರಾದೆ ಸ್ವಾಗತಿಸಿದರು. ಕಾರ್ಯದರ್ಶಿ ನಿರ್ಮಲ ಮಿನೇಜಸ್ ವರದಿ ವಾಚಿಸಿ ದರು. ವಲಯದ ಉಪ ಕಾರ್ಯದರ್ಶಿ ಸವಿತಾ ಮೆಂಡೊನ್ಸಾ ವಂದಿಸಿದರು. ರೀನಾ ಮೆಂಡೊನ್ಸಾ, ನೀತಾ ಮೆಂಡೊನ್ಸಾ ವಿವಿಧ ಮನರಂಜನಾ ಆಟಗಳನ್ನು ನಡೆಸಿಕೊಟ್ಟರು. ಡಯಾನ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News