ಕೊಲ್ಲೂರು: ಕಳವಾದ ಚಿನ್ನದ ಸರ, ಹಣದ ಪರ್ಸ್ 2 ಗಂಟೆಗಳಲ್ಲಿ ಪತ್ತೆ
Update: 2026-05-07 19:29 IST
ಕುಂದಾಪುರ, ಮೇ 7: ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕೇರಳ ರಾಜ್ಯದ ಭಕ್ತರೊಬ್ಬರು ಕಳೆದುಕೊಂಡ 2 ಚಿನ್ನದ ಸರ ಹಾಗೂ ಹಣವನ್ನು ಒಳಗೊಂಡ ಪರ್ಸ್‌ನ್ನು ಪೊಲೀಸರು ಕೇವಲ ಎರಡು ಗಂಟೆಗಳಲ್ಲಿ ಪತ್ತೆ ಹಚ್ಚಿ ಅವುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಮೂಕಾಂಬಿಕಾ ದೇವಸ್ಥಾನದಲ್ಲಿ ಈ ಬೆಲೆಬಾಳುವ ಸೊತ್ತುಗಳು ಕಳವಾಗಿದ್ದು, ಅಲ್ಲಿನ ಸಿಸಿ ಟಿವಿ ಮುಖೇನ ಪೊಲೀಸರು ಅದನ್ನು ಎರಡು ಗಂಟೆಗಳಲ್ಲಿ ಪತ್ತೆ ಹಚ್ಚಿದ್ದು ಅವುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಬುಧವಾರ ಕೊಲ್ಲೂರು ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು ಪಿಎಸ್‌ಐ ಭೀಮಾಶಂಕರ್ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.