×
Ad

ಮುರ್ಡೇಶ್ವರ - ಬೆಂಗಳೂರು ರೈಲು ಸಂಚಾರ ಮಾರ್ಗದಲ್ಲಿ ಬದಲಾವಣೆ

Update: 2026-05-14 18:56 IST

ಉಡುಪಿ, ಮೇ 14: ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಕೆಲವು ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆ ಯಲ್ಲಿ ಮುರ್ಡೇಶ್ವರ ಆಗೂ ಶ್ರೀ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಸಂಚರಿಸುವ ರೈಲು ನಂ.16586 ಎಕ್ಸ್‌ಪ್ರೆಸ್ ರೈಲಿನ ಸಂಚಾರ ಮಾರ್ಗದಲ್ಲಿ ಕೆಲವು ಬದಲಾವಣೆಗಳನ್ನು ನೈರುತ್ಯ ರೈಲ್ವೆ ಮಾಡಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಮುಂದಿನ ಜುಲೈ 16 ಮತ್ತು 17ರಂದು ಸಂಚರಿಸುವ ಮುರ್ಡೇಶ್ವರ- ಬೆಂಗಳೂರು ರೈಲು ಕೆಎಸ್‌ಆರ್ ಬೆಂಗಳೂರು, ಯಶವಂತಪುರ ಜಂಕ್ಷನ್, ಹೆಬ್ಬಾಳ ಹಾಗೂ ಬಾಣಸವಾಡಿ ಮೂಲಕ ಸಂಚರಿಸವಿದೆ. ಈ ಮೂಲಕ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದ ನಿಲುಗಡೆ ಇರುವುದಿಲ್ಲ.

ಅದೇ ರೀತಿ ಮುಂದಿನ ಜುಲೈ 31ರಿಂದ ಆಗಸ್ಟ್ 2ರವರೆಗೆ (3ದಿನ) ಸಂಚರಿಸುವ ಮುರ್ಡೇಶ್ವರ- ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಹಾಸನ ಜಂಕ್ಷನ್, ನೆಲಮಂಗಲ, ಚಿಕ್ಕ ಬಾಣಾವರ, ಯಶವಂತಪುರ ಎ ಕಬಿನ್, ಲೊಟ್ಟೆಗೊಳ್ಳನಹಳ್ಳಿ, ಬಾಣಸವಾಡಿ, ವಿಶ್ವೇಶ್ವರಯ್ಯ ಟರ್ಮಿನಲ್ ಮೂಲಕ ಸಂಚರಿಸಲಿದೆ.

ಈ ಮೂಲಕ ಹೊಳೆನರಸಿಪುರ, ಕೃಷ್ಣರಾಜನಗರ, ಮೈಸೂರು ಜಂಕ್ಷನ್, ಮಂಡ್ಯ, ರಾಮನಗರಂ, ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್ ಹಾಗೂ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಿಲುಗಡೆಯನ್ನು ತಪ್ಪಿಸಿಕೊಳ್ಳಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News