×
Ad

ಸಮಾಜಮುಖಿ ಚಿಂತನೆಯಿಂದ ದೇಶದ ಅಭಿವೃದ್ಧಿ ಸಾಧ್ಯ: ಪ್ರಸಾದ್‌ರಾಜ್ ಕಾಂಚನ್

Update: 2026-05-20 19:13 IST

ಉಡುಪಿ: ಉದ್ಯಮಿಗಳು ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ ದೇಶದ ಅಭಿವೃದ್ಧಿಗೆ ಪೂರಕವಾ ಗಲಿದೆ ಎಂದು ಮಹಾರುದ್ರಯಾಗ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ.

ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಿದ್ದ ಮಹಾ ರುದ್ರಯಾಗದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಎಲ್ಲವನ್ನೂ ಸರಕಾರದಿಂದ ಮಾಡಲು ಸಾಧ್ಯವಿಲ್ಲ. ಹೀಗಾಗಿ ಉದ್ಯಮಿ ಗಳು ಸಮಾಜಮುಖಿ ಚಿಂತನೆ ಬೆಳೆಸಿ ಕೊಂಡು ಸಾಮಾಜಿಕ ಕಾರ್ಯಗಳನ್ನು ಹೆಚ್ಚೆಚ್ಚು ಕೈಗೊಳ್ಳಬೇಕು. ಧಾರ್ಮಿಕತೆಯ ಜೊತೆಗೆ ಮಕ್ಕಳಲ್ಲಿ ಸಾಮಾಜಿಕ ಕಲ್ಪನೆ ಮತ್ತು ಸೇವಾಭಾವನೆ ಬೆಳೆಸಬೇಕಿದೆ ಎಂದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದ ಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಕಿದಿಯೂರು ಹೋಟೆಲ್ ಪ್ರವರ್ತಕ ಭುವನೇಂದ್ರ ಕಿದಿಯೂರು, ಉದ್ಯಮಿ ಮನೋಹರ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಸುಧಾಕರ್ ಶೆಟ್ಟಿ ಮೈರ್ಮಾಡಿ, ಭುಜಂಗ ಶೆಟ್ಟಿ, ಹರಿ ಪ್ರಸಾದ್ ಐತಾಳ್, ಮೀನಾಕ್ಷಿ ಮಾಧವ ಬನ್ನಂಜೆ, ಆಶಾ ಚಂದ್ರಶೇಖರ್, ರತ್ನಾಕರ ಸಾಲಿಯಾನ್, ದಯೇಶ್ ಕಾಂಚನ್, ಸುರೇಂದ್ರ ಕುಂರ್ದ, ರವಿ ಕರ್ಕೇರ, ಸುಧಾರ್ಕ ಎ ಕುಂರ್ದ, ವಿಠಲ ಕರ್ಕೇರ, ಕಿರಣ್ ಕುರ್ಮಾ, ರತನ್, ಸುಧಾರ್ಕ ಕಲ್ಮಾಡಿ, ರಾಮಚಂದ್ರ ಕೋಟ್ಯಾನ್, ಶರತ್ ಕುರ್ಮಾ, ದಾಮೋದರ, ಅಶೋಕ್ ಕುಂರ್ದ, ಗಣೇಶ್ ಅಮೀನ್, ಹರೀಶ್ ಕುರ್ಮಾ, ಸುರೇಶ್ ಅಮೀನ್, ದಯಾಕರ್ ಎ.ಸುವರ್ಣ, ದಿವ್ಯಾರಾಣಿ, ಪ್ರದೀಪ್ ಶೆಟ್ಟಿ, ಕೆ.ಕೃಷ್ಣಮೂರ್ತಿ ಆಚಾರ್ಯ, ತಾರಾನಾಥ ಪೂಜಾರಿ, ಪ್ರಕಾಶ್ ಜಿ.ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.

ಸಹ ಸಂಚಾಲಕ ಬಾಲಕೃಷ್ಣ ಕೊಡವೂರು ಸ್ವಾಗತಿಸಿದರು. ನಂದಕಿಶೋರ್ ಮತ್ತು ದಯಾನಂದ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News