ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಮೃತ್ಯು
Update: 2026-06-04 21:57 IST
ಬೈಂದೂರು, ಜೂ.4: ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದು ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜೂ.3ರ ಸಂಜೆ 6:30ರ ಸುಮಾರಿಗೆ ಬೈಂದೂರಿನ ಗಂಗನಾಡು ಬಳಿ ನಡೆದಿದೆ. ಮೃತರನ್ನು ಬೈಕ್ ಸವಾರ ಮಹಾಬಲ ಪೂಜಾರಿ ಎಂದು ಗುರುತಿಸಲಾಗಿದೆ.
ಮಹಾಬಲ ಪೂಜಾರಿ ಅವರು ಗಂಗನಾಡು ಕಡೆಯಿಂದ ಬೈಕ್‌ನಲ್ಲಿ ಬೈಂದೂರಿನತ್ತ ಹೋಗುತಿದ್ದಾಗ ಅದೇ ದಿಕ್ಕಿನಲ್ಲಿ ಬಂದ ಲಾರಿಯನ್ನು ಅದರ ಚಾಲಕ ನಿರ್ಲಕ್ಷ್ಯದಿಂದ ಚಲಾಯಿಸಿ ಓವರ್‌ಟೇಕ್ ಮಾಡುವ ರಭಸದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದಿತ್ತು.
ಇದರಿಂದ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಸವಾರನ ತಲೆಯ ಮೇಲೆ ಟಿಪ್ಪರ್‌ನ ಹಿಂಬದಿ ಚಕ್ರ ಹರಿದು ತಲೆಬುರುಡೆ ಒಡೆದು ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.