ಕಾರ್ಕಳ| ಪತ್ನಿಯ ಕೊಲೆಗೆ ಯತ್ನ; ಪ್ರಕರಣ ದಾಖಲು
Update: 2026-06-17 21:15 IST
ಕಾರ್ಕಳ, ಜೂ.17: ಪತ್ನಿಯ ಕುತ್ತಿಗೆಯ ಮೇಲೆ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ಜೂ.15ರಂದು ಸಂಜೆ ವೇಳೆ ನಿಟ್ಟೆ ಎಂಬಲ್ಲಿ ನಡೆದಿದೆ.
ಹಲ್ಲೆಯಿಂದ ಗಾಯಗೊಂಡಿರುವ ಬೇಬಿ ಎಂಬವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಧರ್ಮ ಪ್ರತಿದಿನ ತನ್ನ ಪತ್ನಿ ಬೇಬಿ ಜೊತೆ ಜಗಳ ಮಾಡುತ್ತಿದ್ದರು. ಕ್ಷುಲ್ಲಕ ವಿಚಾರವಾಗಿ ಧರ್ಮ ತನ್ನ ಪತ್ನಿ ಬಳಿ ಜಗಳ ಮಾಡಿ ಅವರನ್ನು ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ಕುತ್ತಿಗೆಯ ಮೇಲೆ ಕಡಿದು ಕೊಲೆಗೆ ಯತ್ನಿಸಿರುವು ದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.