×
Ad

ಹೊನ್ನಾಳ ಉರ್ದು ಶಾಲೆಯಲ್ಲಿ ನೋಟ್ ಪುಸ್ತಕ ವಿತರಣೆ

Update: 2026-06-21 19:39 IST

ಬ್ರಹ್ಮಾವರ, ಜೂ.21: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ಎಸ್‌ಎಸ್‌ಎಫ್) ಹೊನ್ನಾಳ ಘಟಕದ ವತಿಯಿಂದ ಹೊನ್ನಾಳ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭವು ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್‌ಎಸ್‌ಎಫ್ ಕುಂದಾಪುರ ಡಿವಿಜನ್ ಅಧ್ಯಕ್ಷ ಸುಲ್ತಾನ್ ಹಾಶಿಮಿ, ಶಿಕ್ಷಣವು ಸಮಾಜದ ಅಭಿವೃದ್ಧಿಗೆ ಮೂಲಾಧಾರವಾಗಿದ್ದು, ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಬ್ರಹ್ಮಾವರ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆಶಾ ಕಿರಣ್ ಎನ್. ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿ ಗಳಿಗೆ ಇಂತಹ ನೆರವುಗಳು ಶಿಕ್ಷಣದತ್ತ ಹೆಚ್ಚಿನ ಆಸಕ್ತಿ ಮೂಡಿಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಎಸ್.ಅಬ್ದುಲ್ ಶುಕೂರ್, ಉಸ್ತಾದ್ ತೌಫೀರ್ ಅಮಾನಿ, ಕುಂದಾಪುರದ ಅಶ್ರಫ್ ಉಸ್ತಾದ್, ಶಾಲೆಯ ಮುಖ್ಯೋಪಾಧ್ಯಾಯ ರೋಬಿ ಪಿಂಟೊ, ನಿವೃತ್ತ ಮುಖ್ಯೋಪಾಧ್ಯಾಯ ಇಮಾಮ್ ಸಾಹೇಬ್ ಟಂಕಸಾಲಿ, ಮಾಜಿ ಪ್ರಭಾರ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ, ಎಸ್‌ಎಸ್‌ಎಫ್ ಉಡುಪಿ ಡಿವಿಜನ್ ಅಧ್ಯಕ್ಷ ಇಮ್ತಿಯಾಜ್ ಸಂತೋಷನಗರ, ಖದೀಮಿ ಜಾಮಿಯಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಖತ್ತಾಬ್, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಮುಸ್ತಾಕ್ ಅಹಮದ್ ಮಾತನಾಡಿದರು.

ಅಧ್ಯಕ್ಷತೆಯನ್ನು ಎಸ್‌ಎಸ್‌ಎಫ್ ಹೊನ್ನಾಳ ಘಟಕದ ಅಧ್ಯಕ್ಷ ಮೊಹಮ್ಮದ್ ಶೆಹರಾಜ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಅದರ ಜೊತೆಗೆ ಶಾಲೆಗೆ ಅಗ್ಯವಿದ್ದ ಎರಡು ಫ್ಯಾನಗಳನ್ನು ಕೊಡುಗೆಯಾಗಿ ನೀಡಲಾಯಿತು.

ಎಸ್‌ಎಸ್‌ಎಫ್ ಹೊನ್ನಾಳ ಘಟಕದ ಸದಸ್ಯರಾದ ಬಿ.ಎಸ್.ಸೆಹ್ರಾನ್, ಸಾದ್ ಅಲಿ, ಮುಝಮ್ಮಿಲ್, ರಿಹಾನ್, ಅರ್ಸಲಾನ್, ಸಿರಾಜ್, ಶಾಲಾ ಮುಖ್ಯಮಂತ್ರಿ ಮೊಹಮ್ಮದ್ ರುಶಾನ್ ಮೊದಲಾದವರು ಉಪಸ್ಥಿತರಿದ್ದರು. ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಇಮ್ತೀಯಾಝ್ ಹೊನ್ನಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News