×
Ad

ಇನ್ಕ್ಲೂಸಿವ್ ಎಜುಕೇಶನ್-ಸೇಫ್ ಮೈಂಡ್ಸ್ ಕುರಿತ ಕಾರ್ಯಾಗಾರ

Update: 2026-06-21 20:03 IST

ಉಡುಪಿ, ಜೂ.21: ಕಮಲ್ ಎ.ಬಾಳಿಗ ಚಾರಿಟೇಬಲ್ ಟ್ರಸ್ಟ್, ಡಾ.ಎ.ವಿ.ಬಾಳಿಗ ಮೆಮೋರಿಯಲ್ ಆಸ್ಪತ್ರೆ, ಒನ್ ಗುಡ್ ಸ್ಟೆಪ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ-ಕರಾವಳಿ, ಸಹಾಸ್ ಪಿಡಿಯಾಟ್ರಿಕ್ ಇಂಟರ್ವೆಂಷನ್ ಸೆಂಟರ್ ಹಾಗೂ ಜೆನೆಸಿಸ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್ ಹಿರಿಯಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಇನ್ಕ್ಲೂಸಿವ್ ಎಜುಕೇಶನ್ -ಸೇಫ್ ಮೈಂಡ್ಸ್ ಎಂಬ ಎರಡು ದಿನಗಳ ಕಾರ್ಯಾಗಾರವನ್ನು ಬ್ರಹ್ಮಗಿರಿ ಐಎಂಎ ಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಮಕ್ಕಳ ತಜ್ಞ ಹಾಗೂ ಐಎಂಎ ಉಡುಪಿ-ಕರಾವಳಿ ಅಧ್ಯಕ್ಷ ಡಾ.ಅಶೋಕ್ ಕುಮಾರ್ ಉದ್ಘಾಟಿ ಸಿದರು. ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಅಭಿವೃದ್ಧಿಯ ಉಪನಿರ್ದೇಶಕ ಡಾ.ಅಶೋಕ ಕಾಮತ್ ಮಾತನಾ ಡಿದರು. ಅಧ್ಯಕ್ಷತೆಯನ್ನು ಉಡುಪಿ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಸಹಾಸ್ ನಿರ್ದೇಶಕಿ, ಮಕ್ಕಳ ಫಿಸಿಯೋ ಥೆರಪಿಸ್ಟ್, ಆಟಿಸಂ ಇಂಟರ್ವೆನ್ಷನಿಸ್ಟ್ ಡಾ.ನೀತಾ ಮೆಹ್ತಾ, ವಿಶೇಷ ಅಗತ್ಯಗಳಿರುವ ಮಕ್ಕಳ ಶಿಕ್ಷಣ, ಒಳಗೊಳ್ಳುವ ಶಾಲಾ ವ್ಯವಸ್ಥೆ ಹಾಗೂ ಮಕ್ಕಳ ಮಾನಸಿಕ ಸುರಕ್ಷತೆ ಕುರಿತು ಮಾಹಿತಿ ನೀಡಿದರು.

ಒನ್ ಗುಡ್ ಸ್ಟೆಪ್ ಟ್ರಸ್ಟಿ ಭಾಸ್ಕರ್ ಸಿ.ಎನ್., ಜೆನೆಸಿಸ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕಿ ನಿರಾಲಿ ವೋರಾ, ಒನ್ ಗುಡ್ ಸ್ಟೆಪ್ ಸ್ಥಾಪಕಿ ಅಮಿತಾ ಪೈ, ನಿವೃತ್ತ ಉಪ ಪ್ರಾಂಶುಪಾಲೆ ದೀಪಾ ಭಂಡಾರಿ ಮೊದವಲಾದ ವರು ಉಪಸ್ಥಿತರಿದ್ದರು. ದೀಪಶ್ರೀ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News