ಕಸ್ತೂರಿ ರಂಗನ್ ವರದಿ| ಜನರಲ್ಲಿ ಗೊಂದಲ ಸೃಷ್ಠಿಸುತ್ತಿರುವ ಕೇಂದ್ರ ಸರಕಾರ: ಮಂಜುನಾಥ ಪೂಜಾರಿ

Update: 2026-08-05 18:27 IST

ಹೆಬ್ರಿ, ಆ.5: ಕಸ್ತೂರಿರಂಗನ್ ವರದಿ ವಿಚಾರದಲ್ಲಿ 2008ರಿಂದಲೂ ಕೇಂದ್ರದ ಬಿಜೆಪಿ ಸರಕಾರವೂ ಜನತೆಗೆ ಗೊಂದಲ ಸೃಷ್ಠಿಸುತ್ತಲೇ ಬಂದಿದೆ. ರಾಜ್ಯದ ಕಾಂಗ್ರೆಸ್ ಸರಕಾರ ವರದಿಯನ್ನು ತಿರಸ್ಕರಿಸಿದ್ದರೂ ಇದೀಗ ಮತ್ತೇ ನೋಟಿಫಿಕೇಶನ್ ಜಾರಿ ಮಾಡುವ ಮೂಲಕ ಮತ್ತೇ ಆತಂಕ ಸೃಷ್ಠಿಸಿದೆ ಎಂದು ರಾಜ್ಯದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆರೋಪಿಸಿದ್ದಾರೆ.

ಮಂಗಳವಾರ ಹೆಬ್ರಿಯ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೆಲ್ಲವೂ ನಮ್ಮ ಸಂಸದರು, ಶಾಸಕರ ಮೌನದಿಂದಲೇ ಆಗುತ್ತಿದೆ. ಇದೀಗ ನಡೆಯುತ್ತಿರುವ ಲೋಕಸಭಾ ಅಧಿವೇಶನದಲ್ಲಿ ಮಲೆನಾಡು ವ್ಯಾಪ್ತಿಯ ಸಂಸದರು ಮಾತನಾಡಿ ರಾಜ್ಯಕ್ಕೆ ಆಗುವ ಅನ್ಯಾಯವನ್ನು ತಪ್ಪಿಸಲಿ ಎಂದು ಆಗ್ರಹಿಸಿದರು.

ಕೇಂದ್ರದ ಬಿಜೆಪಿ ಸರಕಾರಗಳು ನಿರಂರವಾಗಿ ಚುನಾವಣೆಗಳು ಸಮೀಪಿಸುತ್ತಿರುವಾಗಲೇ ಕಸ್ತೂರಿರಂಗನ್ ವರದಿಯ ನೋಟಿಫಿಕೇಶನ್ ಜಾರಿ ಮಾಡುತ್ತ ಬಂದಿದೆ. ಈಗ ಈ ಸಲವೂ ಹಾಗೇಯೆ ಮಾಡಿದೆ. 7ನೇ ನೋಟಿಫೀಕೇಶನ್ ಮಾಡಿದ್ದಾರೆ. ಮುಂದೆ ನಾಲ್ಕೈದು ತಿಂಗಳಿನಲ್ಲಿ ಜಿಪಂ ತಾಪಂ ಚುನಾವಣೆ ಬರಲಿದ್ದು ಅದಕ್ಕಾಗಿ ಜನರಲ್ಲಿ ಆತಂಕ ಭಯ ಹುಟ್ಟಿಸಿ ಮತ ಪಡೆಯಲು ಬಿಜೆಪಿ ಸರಕಾರ ಹುನ್ನಾರ ಮಾಡಿದೆ ಎಂದು ಅವರು ದೂರಿದರು.

ಕಸ್ತೂರಿ ರಂಗನ್ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಎಲ್ಲಾ ಸಂಸದರು ಬಿಜೆಪಿಯವರೇ ಆಗಿದ್ದಾರೆ. ಜಾರಿಗೊಳಿಸುವಾಗ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವರಾಗಿದ್ದರು. ಆಗಲೂ ಅವರು ಮೌನವಾಗಿದ್ದರು. ಮೈಸೂರು ಸಂಸದ ಯಧುವೀರ ಶ್ರೀಕಂಠದತ್ತ ಒಡೆಯರ್, ಮಂಗಳೂರು ಸಂಸದ ಬ್ರಿಜೇಶ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಕ್ಷೇತ್ರದಲ್ಲಿ ಕಸ್ತೂರಿರಂಗನ್ ವರದಿ ನೋಟಿಫಿಕೇಶನ್ ಜಾರಿಯಾಗಿದೆ. ಸಂಸದರು ಶಾಸಕರು ಯಾರೂ ತುಟಿ ಬಿಚ್ಚುತ್ತಿಲ್ಲ, ಪದೇ ಪದೇ ನೋಟಿಫೀಕೇಶನ್ ಜಾರಿ ಮಾಡಿ ಮತ್ತೇ ಮತ್ತೇ ಭಯ ಹುಟ್ಟಿಸುತ್ತಿದ್ದಾರೆ ಹೊತರು ಜನರ ಸಮಸ್ಯೆ ದೂರ ಮಾಡುತ್ತಿಲ್ಲ ಎಂದು ಮಂಜುನಾಥ ಪೂಜಾರಿ ಆರೋಪಿಸಿದರು.

ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುವಾರ ಇದೀಗ 60 ದಿನಗಳ ಅವಧಿಯ ನೋಟಿಫೀಕೇಶನ್ ಜಾರಿ ಮಾಡಿ ಭಯಗೊಳಿಸಿದ್ದಾರೆ. ಜನರಿಗೆ ಅನ್ಯಾಯವಾದರೆ ಅದಕ್ಕೆಲ್ಲ ಸಂಸದರೆ ಹೊಣೆಯಾಗುತ್ತಾರೆ. ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರ ಜನರ ಭಾವನೆ ಅರ್ಥ ಮಾಡಿ ಕೊಂಡು ಸಮಸ್ಯೆಯನ್ನು ದೂರ ಮಾಡಲಿದೆ. ನಾವು ಮುಖ್ಯಮಂತ್ರಿ ಯವರನ್ನು ಬೇಟಿ ಮಾಡಿ ಮನವರಿಕೆ ಮಾಡಲಿದ್ದೇವೆ. ಬಿಜೆಪಿ ಕೇಂದ್ರ ಸರಕಾರ ಮತ್ತು ನಾಯಕರು ಏನು ಮಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಯಾಲು ಗೋಪಿನಾಥ ಭಟ್, ಪ್ರಚಾರ ಸಮಿತಿಯ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ, ಹೆಬ್ರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಶೇರಿರ್ಗಾ, ಪ್ರಮುಖ ರಾದ ಚಂದ್ರಶೇಖರ ಬಾಯರಿ, ಎಚ್. ಜನಾರ್ಧನ್, ದಿನೇಶ ಶೆಟ್ಟಿ ಚಾರ, ಎಚ್.ಬಿ.ಸುರೇಶ್, ರಾಘವೇಂದ್ರ ನಾಯ್ಕ್, ಸಂತೋಷ ನಾಯಕ್ ಕನ್ಯಾನ, ಗುಳ್ಕಾಡು ಭಾಸ್ಕರ ಶೆಟ್ಟಿ, ನಿಲೇಶ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News