ಕುತ್ಪಾಡಿ: ನವಜಾತ ಶಿಶು ಸುರಕ್ಷಾ ಕಾರ್ಯಕ್ರಮ
ಉಡುಪಿ: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಬಾಲ ರೋಗ ವಿಭಾಗ, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ), ರಾಷ್ಟ್ರೀಯ ನಿಯೋನೆಟಾಲಜಿ ವೇದಿಕೆ ಹಾಗೂ ಪೀಡಿಯಾಟ್ರಿಕ್ಸ್ ವಿಭಾಗ ಕೆ.ಎಂ.ಸಿ ಮಣಿಪಾಲದ ಸಹಯೋಗದೊಂದಿಗೆ ಎರಡು ದಿನಗಳ ಬೇಸಿಕ್ ಹಾಗೂ ಅಡ್ವಾನ್ಸ್ ನವಜತ ಶಿಶು ಸುರಕ್ಷಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನ ತರಬೇತಿದಾರ ಮಣಿಪಾಲ ಕೆಎಂಸಿ ಪೀಡಿಯಾ ಟ್ರಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಲೆಸ್ಲಿ ಲ್ಯುವಿಸ್ ಮಾತನಾಡಿ, ಯಾವುದೇ ಜನನ ವಿಧಾನದ ಹೊರತಾಗಿಯೂ ತಾಯಿಯ ಆರೋಗ್ಯ ದೊಂದಿಗೆ ಮಗುವಿನಲ್ಲಿ ಕಂಡುಬರಬಹುದಾದ ಉಪದ್ರವಗಳನ್ನು ನಿರೀಕ್ಷಿಸಿ ಸಕಾಲಿಕ ಶಿಶು ನಿರ್ವಹಣೆ ಮಾಡುವುದು ಅವಶ್ಯಕ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ವಹಿಸಿದ್ದರು. ಮುಖ್ಯ ಸಂಘಟನಾ ಕಾರ್ಯದರ್ಶಿ, ಬಾಲರೋಗ ವಿಭಾಗ ಮುಖ್ಯಸ್ಥ ಡಾ.ಪೃಥ್ವಿರಾಜ್ ಪುರಾಣಿಕ್ ಸ್ವಾಗತಿಸಿ, ಸಹ ಪ್ರಾಧ್ಯಾಪಕಿ ಡಾ.ಸಹನಾ ಶಂಕರಿ ವಂದಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಂಗಳೂರಿನ ಯೆನಪೋಯ ಮೆಡಿಕಲ್ ಕಾಲೇಜಿನ ಮಕ್ಕಳ ತಜ್ಞ ಡಾ.ಮಿಥುನ್ ಎಚ್.ಕೆ., ಮಂಗಳೂರಿನ ಫಾರ್ದ ಮುಲ್ಲರ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಕೆ.ಜೊಹಾರಾ ಪರ್ವೀನ್, ಕಾರ್ಕಳದ ಟಿಎಂಎ ಪೈ ರೋಟರಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಸನ್ನಿಧಿ ನಾಯಕ್ ಉಪಸ್ಥಿತರಿದ್ದರು.
ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಡಾ.ಶೈಲಜಾ ಯು. ನವಜಾತ ಸುರಕ್ಷಾ ಕ್ರಮದ ಅರಿವು, ಕೌಶಲ್ಯ ಹಾಗೂ ಸಮಯೋಚಿತ ನಿರ್ಧಾರಗಳ ಮಹತ್ವವನ್ನು ತಿಳಿಸಿದರು.
ಮಕ್ಕಳ ತಜ್ಞ ಡಾ.ಜನಾರ್ದನ ಪ್ರಭು ಮಾತನಾಡಿದರು. ಸಂಸ್ಥೆಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಪಿ. ಇವರು ಅಧ್ಯಕ್ಷತೆ ವಹಿಸಿದ್ದರು. ಸಹಪ್ರಾಧ್ಯಾಪಕ ಡಾ.ನಾಗರತ್ನ ಎಸ್.ಜೆ. ಸ್ವಾಗತಿಸಿ, ಸಂಯೋಜಕಿ ಡಾ.ಕಾವ್ಯ ವಂದಿಸಿದರು.