ಕುಕ್ಕುಂದೂರು ಫ್ರೆಂಡ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವ ಹಾಗೂ ವನಮಹೋತ್ಸವ
ಸಂಘವು ಕಳೆದ 17 ವರ್ಷಗಳಿಂದ ಪರಿಸರ ಸಂರಕ್ಷಣೆ ಮತ್ತು ಹಸಿರು ಪರಿಸರ ನಿರ್ಮಾಣದ ಸಂದೇಶ ಸಾರುವ ಉದ್ದೇಶದಿಂದ ವನಮಹೋತ್ಸವ ಆಚರಿಸುತ್ತಿದೆ. ಈವರೆಗೆ ಸ್ಥಳೀಯವಾಗಿ 200ಕ್ಕೂ ಅಧಿಕ ವಿವಿಧ ಬಗೆಯ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.
ದೇಶಭಕ್ತಿ, ಪರಿಸರ ಪ್ರೀತಿ ಮತ್ತು ಸಾಮಾಜಿಕ ಬದ್ಧತೆಯ ಸಂದೇಶದೊಂದಿಗೆ ಸ್ವಾತಂತ್ರ್ಯೋತ್ಸವದ ಸಂಭ್ರಮದ ಜೊತೆಗೆ ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ಜನರಲ್ಲಿ ಮೂಡಿಸುವ ಉದ್ದೇಶವನ್ನು ಇಟ್ಟು ಈ ಕಾರ್ಯಕ್ರಮ ನಡೆಸಲಾಗುತ್ತಿದೆ.
ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಇದರ ಸಂಚಾಲಕರಾದ ರಾಜೇಂದ್ರ ಮುದ್ಯ, ಶಾಲಾ ಮುಖ್ಯೋಪಾಧ್ಯಾಯರಾದ ಸುಜಾತಾ ಎನ್. ರಾಜ್, ಸ್ಥಳೀಯ ಉದ್ಯಮಿ ಕಮಲಾಕ್ಷ ನಾಯಕ್ ಶಾಂತೇರಿ ಕಾಮಾಕ್ಷಿ, ಸಂಘದ ಗೌರವಾಧ್ಯಕ್ಷರಾದ ತ್ರಿವಿಕ್ರಮ ಕಿಣಿ, ಅಧ್ಯಕ್ಷರಾದ ಪುಷ್ಪಾ ಪ್ರಭು, ಉಪಾಧ್ಯಕ್ಷರಾದ ಲಲಿತಾ ಶೆಟ್ಟಿ, ಶಾಲೆಯ ಅಧ್ಯಾಪಕ ವೃಂದದವರು, ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.