ಬಂಗ್ಲೆಗುಡ್ಡೆ : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ 80ನೇ ಸ್ವಾತಂತ್ರೋತ್ಸವ
Update: 2026-08-15 15:15 IST
ಕಾರ್ಕಳ : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಬಂಗ್ಲೆಗುಡ್ಡೆ ಆಶ್ರಯದಲ್ಲಿ ದೇಶದ 80ನೇ ಸ್ವಾತಂತ್ರೋತ್ಸವವನ್ನು ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಮೈದಾನದಲ್ಲಿ ಆಚರಿಸಲಾಯಿತು.
ಧ್ವಜಾರೋಹಣವನ್ನು ಪುರಸಭೆ ಮಾಜಿ ಸದಸ್ಯೆ, ಹಿರಿಯ ಸಮಾಜ ಸೇವಕಿ ಪ್ಯಾರಿ ಪರ್ವೀನ್ ನೆರವೇರಿಸಿದರು
ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ,ಮಾಜಿ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮೊಹಮ್ಮದ್ ಶರೀಫ್, ಪುರಸಭೆ ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಷ್ಪಾಕ್ ಅಹ್ಮದ್, , ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಗಣೇಶ್ ರಾಣೆ, ಕಾರ್ಯದರ್ಶಿ ಸುಹಾಸ್, ಕೋಶಾಧಿಕಾರಿ ಶ್ರೇಯಸ್, ಉಪಾಧ್ಯಕ್ಷ ಧರ್ಮಪಾಲ್, ಮಾಜಿ ಅಧ್ಯಕ್ಷ ವಿಜಯ್,ನಿಖಿಲ್, ರಮೇಶ್ ಹಾಗೂ ಇನ್ನಿತರ ಪದಾಧಿಕಾರಿಗಳು ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು