ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾಕೂಟದ ಕರಪತ್ರ ಬಿಡುಗಡೆ
Update: 2026-08-17 20:18 IST
ಉಡುಪಿ, ಆ.17: ಕೊಬುಡೊ ಬುಡೋಕಾನ್ ಕರಾಟೆ ಡೊ ಅಸೋಸಿಯೇಷನ್ ಕರ್ನಾಟಕ ಸಂಸ್ಥೆಯ ವತಿಯಿಂದ ನ.14 ಮತ್ತು 15ರಂದು ನಡೆಯಲಿರುವ 9ನೇ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧಾಕೂಟದ ಕರಪತ್ರವನ್ನು ಪರ್ಯಾಯ ಶಿಶೂರು ಮಠಾಧೀಶ ಶ್ರಿವೇದವರ್ಧನ ತೀರ್ಥ ಸ್ವಾಮೀಜಿ ಶಿರೂರು ಮಠದಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕರಾಟೆ ಸಂಸ್ಥೆಯ ಅಧ್ಯಕ್ಷ, ಮುಖ್ಯ ಶಿಕ್ಷಕ ಕ್ಯೋಶಿ ರವಿ ಕುಮಾರ್ ಉದ್ಯಾವರ, ಉಪಾಧ್ಯಕ್ಷ ರೆನ್ಶಿ ಸಂತೋಷ್ ಸುವರ್ಣ ಬೊಳ್ಜೆೆ, ಹಿರಿಯ ಶಿಕ್ಷಕರಾದ ಶಿಹಾನ್ ಉಮೇಶ್ ಕರ್ಕೇರ, ಶಿಹಾನ್ ಸಚಿನ್ ಮಂಗಳೂರು, ರೆನ್ಶಿ ಸೋಮನಾಥ ಸುವರ್ಣ ಮಟ್ಟು, ಶಿಹಾನ್ ಸೀತಾರಾಮ ಪೂಜಾರಿ, ಜಯ ಬಾಲರಾಜ್, ಅಮೃತ ಸದಾನಂದ, ನಿಖಿಲ್ ಬಂಗೇರಾ, ಅಭಿಷೇಕ್ ಹೆಗ್ಡೆ, ಯತಿನ್ ಪೂಜಾರಿ, ಶ್ರುತಿಕ್, ಉದ್ಯಮಿಗಳಾದ ಭಾಸ್ಕರ್, ಮಠದ ರಾಮ ಮೂರ್ತಿ ಹಾಗೂ ಪಂದ್ಯಕೂಟದ ಆಯೋಜಕ ಶಿಹಾನ್ ಹರ್ಷ ಭಾಗವತ್ ಉಪಸ್ಥಿತರಿದ್ದರು.