ಉಡುಪಿ: ಪೊಲೀಸ್ ಇಲಾಖೆಗೆ 40 ಬ್ಯಾರಿಕೇಟ್‌ಗಳ ಹಸ್ತಾಂತರ

Update: 2026-08-17 20:16 IST

ಉಡುಪಿ, ಆ.17: ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಂತ್ರಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಹಕಾರಿಯಾಗುವ ಉದ್ದೇಶದಿಂದ ಎಚ್‌ಡಿಎಫ್‌ಸಿ ಲೈಫ್ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ 40 ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಎಚ್‌ಡಿಎಫ್‌ಸಿ ಲೈಫ್ ಸಂಸ್ಥೆಯ ಪ್ರತಿನಿಧಿಗಳು ಬ್ಯಾರಿಕೇಡ್‌ಗಳನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಲ್ಪೆ ಸಿಪಿಐ ರಾಮಚಂದ್ರ ನಾಯಕ್, ಟ್ರಾಫಿಕ್ ಪಿಎಸ್‌ಐ ಮಹೇಶ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಮತ್ತು ಎಚ್‌ಡಿಎಫ್‌ಸಿ ಲೈಫ್ ಉಡುಪಿ ಶಾಖಾ ವ್ಯವಸ್ಥಾಪಕ ಭರತ್, ಬಿಸಿನೆಸ್ ಮ್ಯಾನೇಜರ್ ಸಂದೀಪ್ ನಾಯಕ್, ಎಕ್ಸಿಕ್ಯೂಟಿವ್ ಸೇಲ್ಸ್ ಮ್ಯಾನೇಜರ್ ನಂದಾ ದೀಪ, ಸೇಲ್ಸ್ ಮ್ಯಾನೇಜರ್ ಶೈಲೇಶ್ ಶೆಟ್ಟಿ, ಆಯೋಜಕ ಯೊಗೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News