ಕುಂದಾಪುರ, ಸೆ.7: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ನಡೆದಿದೆ.

ಆ.17ರಿಂದ ಸೆ.6ರ ಮಧ್ಯಾವಧಿಯಲ್ಲಿ ಕರ್ಕುಂಜೆ ಗ್ರಾಮದ ಗಂಗಾಧರ ಮಂಜರು ಎಂಬವರ ಮನೆಯ ಬೆಡ್‌ ರೂಮ್‌ನ ಗೋಡ್ರೆಜ್‌ನಲ್ಲಿರಿಸಿದ್ದ ಚಿನ್ನದ ಹರಳಿನ ಉಂಗುರ 2, ಚಿನ್ನದ ಬ್ರಾಸ್‌ಲೇಟ್, ಚಿನ್ನದ ಚೈನ್ ಸಹಿತ ಒಟ್ಟು 56 ಗ್ರಾಂ ತೂಕದ ಸುಮಾರು 8 ಲಕ್ಷ ರೂ ಮೌಲ್ಯದ ಚಿನ್ನದ ಒಡವೆ ಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor