ಪ್ರತ್ಯೇಕ ಪ್ರಕರಣ: ನಾಲ್ವರ ಆತ್ಮಹತ್ಯೆ
ಕುಂದಾಪುರ, ಸೆ.17: ವಿಪರೀತ ಮದ್ಯಪಾನ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆ.24ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಕ್ವಾಡಿ ಗ್ರಾಮದ ಯೋಗೀಶ ಪೂಜಾರಿ(50) ಎಂಬವರು ಸೆ.15ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ವಿಪರೀತ ಮದ್ಯ ಸೇವನೆ ಮಾಡುವ ಚಟ ಹೊಂದಿದ್ದ ಉಪ್ಪುಂದ ಕಾಸನಾಡಿ ನಿವಾಸಿ ರವೀಂದ್ರ ದೇವಾಡಿಗ(31) ಎಂಬವರು ಜೀವನದಲ್ಲಿ ಜಿಗುಪಪ್ಸೆಗೊಂಡು ಸೆ.15ರಂದು ಮದ್ಯಾಹ್ನ ಮನೆಯ ಸಮೀಪದ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ: ಅನಾರೋಗ್ಯದಿಂದ ಬಳಲುತ್ತಿದ್ದ ಶಿರಿಯಾರ ಗ್ರಾಮದ ಆನಂದ ಆಚಾರ್ಯ(51) ಎಂಬವರು ಸೆ.16ರಂದು ಬೆಳಗಿನ ಜಾವ ಮನೆಯ ಬಾವಿಯ ರಾಟೆಯ ಕಬ್ಬಿಣದ ರಾಡ್‌ಗೆ ನೇಣು ಬಿಗಿದು ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ವಕ್ವಾಡಿ ಗ್ರಾಮದ ತೆಂಕಬೆಟ್ಟು ನಿವಾಸಿ ಮಂಜಯ್ಯ ಎಂಬವರ ಮಗಳು ಸವಿತಾ(36) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಸೆ.15ರಂದು ರಾತ್ರಿ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.