ಉಡುಪಿ, ಸೆ.22: ಯುನಿಟಿ ಸೌಹಾರ್ದ ಸಹಕಾರಿ ಸಂಘದ 9ನೇ ವರ್ಷದ ಮಹಾಸಭೆಯು ಸಂಸ್ಥೆಯ ಅಧ್ಯಕ್ಷ ಜಮಾಲ್ ಹೈದರ್ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಆವರಣದಲ್ಲಿ ಸೆ.20ರಂದು ಜರಗಿತು.

ವಾರ್ಷಿಕವರದಿ ಲೆಕ್ಕಪತ್ರವನ್ನು ಮಂಡಿಸಲಾಯಿತು. ಸಂಘವು ಸುಮಾರು 14.5 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 20.71ಲಕ್ಷ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಯಿತು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ ನಾಯರಕೆರೆ ಅವರನ್ನು ಸನ್ಮಾನಿಸಲಾಯಿತು. ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.90 ಕಿಂತ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ 14 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪಿ.ಪರ್ವೇಜ್ ಮಲ್ಪೆ ಮತ್ತು ಶೇಖ್ ಸಲೀಂ ಸಾಹೇಬ್ ಬ್ರಹ್ಮಾವರ ಅತಿಥಿ ಗಳಾಗಿ ಭಾಗವಹಿಸಿದ್ದರು. ಉಪಾದಕ್ಷ್ಯರದ ಮನೆಗಾರ್ ಮೊಹಮ್ಮದ್ ಮನ್ಸೂರ್ ಶಿರೂರು, ನಿರ್ದೇಶಕರಾದ ಹಬಿಬುಲ್ಲಾ ಶೇಖ್ ಜಿ.ಶಿರೂರು, ಸೈಯದ್ ಅಝೀಂ ಬ್ರಹ್ಮಾವರ, ಮೊಹಮ್ಮದ್ ಸಯೀದ್ ಉಡುಪಿ, ಮೊಹಮ್ಮದ್ ರಫೀಕ್ ಸಾಹೇಬ್ ಬ್ರಹ್ಮಾವರ ರವರು ಉಪಸ್ಥಿತರಿದ್ದರು.

ಸಿಇಒ ಫಝೀಲ್ ಅಹಮ್ಮದ್ ವಾರ್ಷಿಕ ವರದಿ, ಮುಂದಿನ ವರ್ಷದ ಕ್ರಿಯಾಯೋಜನೆ ಮತ್ತು ಗುರಿಗಳನ್ನು ವಿವರಿಸಿ ದರು. ಪ್ರಧಾನ ವ್ಯವಸ್ಥಾಪಕ ನವಾಝ್ ಜೆಕೆ ಸ್ವಾಗತಿಸಿದರು. ನಿರ್ದೇಶಕ ಇಲ್ಯಾಸ್ ಸಾಸ್ತಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂದಾಪುರ ಶಾಖೆಯ ವ್ಯವಸ್ಥಾಪಕ ನವಾಜ್ ಶೇಖ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor