ಪದ ಪಲ್ಲವಿ’ ಕನ್ನಡ ಕವನ ಸ್ಪರ್ಧೆಯ ಪೋಸ್ಟರ್ ಬಿಡುಗಡೆ
ಉಡುಪಿ, ಸೆ.22: ರಜತ ಮಹೋತ್ಸವದ ಸಂಭ್ರಮದಲ್ಲಿರುವ ಸುಮನಸಾ’ ಸಂಸ್ಥೆಯ ರಜತ ಸರಣಿ ಕಾರ್ಯ ಕ್ರಮಗಳ ಭಾಗವಾಗಿ ಆಯೋಜಿಸಲಾದ ಪದ ಪಲ್ಲವಿ’ ಕನ್ನಡ ಕವನ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಸಮಾರಂಭವು ಸಂಸ್ಥೆಯ ಕಾರ್ಯಾಲಯದಲ್ಲಿ ನಡೆಯಿತು.
ಸಂಸ್ಥೆಯ ಆರಂಭದ ದಿನಗಳಿಂದಲೂ ಸಕ್ರಿಯ ಸದಸ್ಯೆಯಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಏಳಿಗೆಗೆ ಕೊಡುಗೆ ನೀಡಿದ ದಿವಂಗತ ಜ್ಯೋತಿ ಅವರ ಸವಿನೆನಪಿನಲ್ಲಿ ಹಮ್ಮಿಕೊಳ್ಳಲಾದ ಈ ಸ್ಪರ್ಧೆಯನ್ನು ಜ್ಯೋತಿ ಅವರ ತಾಯಿ ಜಯಲಕ್ಷ್ಮಿ ಕವನ ಸ್ಪರ್ಧೆಯ ಅಧಿಕೃತ ಪೋಸ್ಟರ್ ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸುಮನಸಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಮಾತನಾಡಿ, ಸಂಸ್ಥೆಯ ಆರಂಭಿಕ ದಿನಗಳಲ್ಲಿ ಜ್ಯೋತಿ ಅವರ ಶ್ರಮ ಮತ್ತು ಬದ್ಧತೆ ಅನನ್ಯವಾದದ್ದು. ಅವರ ನೆನಪನ್ನು ಶಾಶ್ವತವಾಗಿಸಲು ಹಾಗೂ ಹೊಸ ತಲೆಮಾರಿನ ಕಾವ್ಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ’ಪದ ಪಲ್ಲವಿ’ ಕವನ ಸ್ಪರ್ಧೆಯನ್ನು ಹಮ್ಮಿಕೊಳ್ಳ ಲಾಗಿದೆ. ಸಾಹಿತ್ಯಾಸಕ್ತರು ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ಎಂ.ಎಸ್.ಭಟ್ ಮಾತನಾಡಿದರು. ಸಂಚಾಲಕ ಭಾಸ್ಕರ್ ಪಾಲನ್, ಕಾರ್ಯಕ್ರಮ ಸಂಯೋಜಕರಾದ ರಾಗಿಣಿ ಹರೀಶ್ ಹಾಗೂ ಶುಭಾ ಯೋಗೀಶ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರ ಕಾಂತ್ ಕಾರ್ಯಕ್ರಮ ನಿರೂಪಿಸಿದರು.