ತೆಂಕುಬಿರ್ತಿ ಆದಿದ್ರಾವಿಡ ಸಹಕಾರ ಸಂಘದ ಮಹಾಸಭೆ
ಬ್ರಹ್ಮಾವರ, ಸೆ.22: ತೆಂಕುಬಿರ್ತಿ ಆದಿದ್ರಾವಿಡ ಸಹಕಾರ ಸಂಘದ 9ನೇ ವಾರ್ಷಿಕ ಮಹಾಸಭೆಯು ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ನಡೆಯಿತು.
ಸಂಘದ ಅಧ್ಯಕ್ಷ ಸುಧಾಕರ್ ಗುಜ್ಜರಬೆಟ್ಟು ವಾರ್ಷಿಕ ವರದಿ ಮಂಡಿಸಿ, ಸಂಘವು ಸತತವಾಗಿ 9ನೇ ವರ್ಷವೂ ಲಾಭ ಗಳಿಸಿದ್ದು, ಈ ಬಾರಿ ಸದ್ಯಸರಿಗೆ ಶೇ.15 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು.
ಸಂಘದ ಆಂತರಿಕ ಲೆಕ್ಕ ಪರಿಶೋಧಕ ಸುರೇಶ್ ಬಿರ್ತಿ ಸಂಘದ ಚಟುವಟಿಕೆ ಹಾಗೂ ಬಜೆಟ್ ಮಂಡಿಸಿದರು. ಈ ಸಂದರ್ಭದಲ್ಲಿ ದಶಮಾನೋತ್ಸವದ ಕೊಡುಗೆಯಾಗಿ ಎರಡು ಉಳಿತಾಯ ಯೋಜನೆಗಳಾದ ಭೀಮಾ ಲಕ್ಷಾಧಿಪತಿ ಹಾಗೂ ಭೀಮಾ ಮಾಸಿಕಕ್ಕೆ ಚಾಲನೆ ನೀಡಲಾಯಿತು. ಪ್ರಭಾರ ಸಿಇಓ ಪ್ರಶಾಂತ್ ಬಿರ್ತಿ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ ಕಳೆದ ವರ್ಷ ಐತಿಹಾಸಿಕ ಮೈಸೂರು ದಸರಾ ಜಂಭು ಸವಾರಿಯಲ್ಲಿ ಭಾಗವಹಿಸಿದ ಅಂಕದಮನೆ ಜಾನಪದ ಕಲಾ ತಂಡದ ಸದಸ್ಯರನ್ನು ಗೌರವಿಸಲಾಯಿತು.
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಎಸ್.ನಾರಾಯಣ್, ಸಾಹಿತಿ ಪೆರೂರು ಜಾರು, ಬ್ಯಾಂಕ್ ಆಫ್ ಬರೋಡದ ಅಧಿಕಾರಿ ಸುಬ್ರಮಣ್ಯ ಪ್ರಸಾದ್, ಅಂಕಣಕಾರ ರವಿ ಪುತ್ತೂರ, ಭೋಜರಾಜ್ ಕೆ., ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ಸಂಪತ್‌ರಾಜ್, ಹರಿಶ್ಚಂದ್ರ ಕೆ.ಡಿ. ಮುಖ್ಯ ಅತಿಥಿಗಳಾಗಿದ್ದರು.
ಸಂಘದ ಉಪಾಧ್ಯಕ್ಷ ವರ್ಣ ವಿಶ್ವನಾಥ್, ನಿರ್ದೇಶಕರುಗಳಾದ ಜಗನ್ನಾಥ್ ಬಿ,ಸಂತೋಷ್ ಬಿರ್ತಿ, ಅನಿಲ್ ಕುಮಾರ್, ಚೈತನ್ಯ ಬಿರ್ತಿ, ಗಂಗೆ, ಸುಮನಾ, ಶಂಕರ ಇಂದಿರಾನಗರ, ಸಂದೇಶ್ ಕುಮಾರ್ ಬಿರ್ತಿ ಉಪಸ್ಥಿತರಿದ್ದರು.
ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಪ್ರಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಶಿರಾಜ್ ಉಪ್ಪೂರು ಕಾರ್ಯಕ್ರಮ ನಿರೂಪಿಸಿದರು. ಲಿಂಗಪ್ಪ ಕುಟ್ಟಿ ವಂದಿಸಿದರು.