ಮತದಾರರ ಹೆಸರು ಡಿಲಿಟ್ಗೆ ಅರ್ಜಿ ಸಲ್ಲಿಸಿದ ಅಭಯ್ ಪಾಟೀಲ್ ವಿರುದ್ಧ ಕ್ರಮಕೈಗೊಳ್ಳಿ: ಪ್ರಶಾಂತ್ ಜತ್ತನ್ನ
ಉಡುಪಿ, ಸೆ.24: ಎಸ್‌ಐಆರ್ ಪ್ರಕ್ರಿಯೆ ವೇಳೆ ಬೆಳಗಾವಿಯಲ್ಲಿ 2000 ಮತದಾರರ ಹೆಸರು ಡಿಲಿಟ್ ಮಾಡಲು ಅಭಯ್ ಪಾಟೀಲ್ ಅರ್ಜಿ ನೀಡಿರುವ ಕುರಿತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಬಿಡುಗಡೆ ಮಾಡಿರುವ ದಾಖಲೆಯ ಕುರಿತ ವಿಚಾರವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಎಸ್‌ಐಆರ್ ಕುರಿತು ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು ಇಂತಹ ಸಂದರ್ಭದಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಬರೆದಿದ್ದಾರೆ ಎನ್ನಲಾದ ಪತ್ರ ಪ್ರಮುಖವಾಗಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾ ಗಿದೆ. ಈಗಾಗಲೇ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹೆಸರು ಡಿಲೀಟ್ ಮಾಡುವ ವಿಚಾರದಲ್ಲಿ ಮುಖ್ಯ ಚುನಾ ವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ವಿರುದ್ದ ಇತರ ಇಬ್ಬರು ಆಯುಕ್ತರು ಗಂಭೀರವಾದ ಆರೋಪ ಮಾಡಿದ ಬೆನ್ನಲ್ಲೇ ಇಂತಹ ಪತ್ರದ ಕುರಿತು ದಾಖಲೆ ಬಿಡುಗಡೆ ಮಾಡಿರುವುದು ಕಂಡಾಗ ಆಯೋಗದ ಕಾರ್ಯವೈಖ್ಯರಿಯ ಕುರಿತು ಇನ್ನಷ್ಟು ಸಂಶಯ ಮೂಡಲು ಕಾರಣವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಚುನಾವಣಾ ಆಯೋಗ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕಾದ ಸಂಸ್ಥೆಯಾಗಿದ್ದು ಅಂತಹ ಸ್ಥಳದಲ್ಲೇ ಇಂತಹ ಗಂಭೀರ ಆರೋಪಗಳು ಕೇಳಿ ಬಂದರೆ ಇದರಿಂದ ಅಲ್ಪಸಂಖ್ಯಾತ ಸಮುದಾಯ ಸಂವಿಧಾನ ಬದ್ದ ಹಕ್ಕು ಗಳಿಂದ ವಂಚಿಸಲ್ಪಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಲಕ್ಷಾಂತರ ಮಂದಿ ಅಲ್ಪಸಂಖ್ಯಾತ ಸಮುದಾಯದ ಜನರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜ್ಯದಾದ್ಯಂತ ತೊಂದರೆ ಅನುಭವಿಸಿದ್ದಾರೆ. ಒಂದೊಮ್ಮೆ ಬಿಜೆಪಿ ಶಾಸಕ ಅಭಯ ಪಾಟೀಲ್ ನೀಡಿರುವ ಪತ್ರ ಸತ್ಯವೇ ಆದಲ್ಲಿ ಈ ವಿಷಯದ ಕುರಿತು ವಿರುದ್ದ ಚುನಾವಣಾ ಆಯೋಗ ಗಂಭೀರ ವಾಗಿ ಪರಿಗಣಿಸಬೇಕು. ಮತ್ತು ಶಾಸಕರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕು. ಒಂದು ವೇಳೆ ಬಿಜೆಪಿಯ ಕೈಗೊಂಬೆಯಾಗಿ ವರ್ತಿಸಿದರೆ ಮುಂದೆ ಉಗ್ರ ಹೋರಾಟ ಮಾಡ ಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.