ಕಂಡ್ಲೂರು ಸೇತುವೆ ತೆರವು: ಎಸಿಗೆ ಮನವಿ ಸಲ್ಲಿಕೆ
ಕುಂದಾಪುರ, ಅ.1: ಸಿದ್ದಾಪುರ-ಕುಂದಾಪುರ ರಾಜ್ಯ ಹೆದ್ದಾರಿಯ ಕಂಡ್ಲೂರಿನ ಹಳೆ ಸೇತುವೆ ಹಾಗೂ ಹೊಸ ಸೇತುವೆ ನಿರ್ಮಾಣದ ಕುರಿತಂತೆ ಸೇತುವೆ ಹೋರಾಟಗಾರರ ವತಿಯಿಂದ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್. ಅವರಿಗೆ ಇಂದು ಮನವಿ ಸಲ್ಲಿಸಲಾಯಿತು.
ಕಂಡ್ಲೂರಿನ ಈ ಹಳೆಯ ಸೇತುವೆಯನ್ನು ಹೊಸ ಸೇತುವೆಯಾಗದೇ ತೆರವು ಮಾಡದಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಹಳೆಯ ಸೇತುವೆಯನ್ನು ತೆರವು ಮಾಡಿದರೆ ಅದರಿಂದ ಆಗುವಂತಹ ತೊಂದರೆಗಳನ್ನು ಇದೇ ವೇಳೆ ಮನವರಿಕೆ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಸದಾನಂದ ಬಳ್ಕೂರು, ಪ್ರದಿಪ್ ಕುಮಾರ ಶೆಟ್ಟಿ ಗುಡಿಬೆಟ್ಟು, ನಿಶ್ಚಿತ್ ಶೆಟ್ಟಿ ಬಳ್ಕೂರು, ದಯಾನಂದ್, ಮುನಾಫ್ ಕಂಡ್ಲೂರು, ಕಿರಣ್ ಹೆಗ್ಡೆ ಅಂಪಾರು, ಕಾಮರಾಜ್ ಶೆಟ್ಟಿ ಹಳ್ನಾಡು, ಸಾಮ್ರಾಟ್ ಶೆಟ್ಟಿ ಹಳನಾಡು, ವಿಜಯ್ ಪುತ್ರನ್, ಪ್ರಕಾಶ್ ಚಂದ್ರ ಶೆಟ್ಟಿ, ಮುಂಬಾರು ದಿನಕರ ಶೆಟ್ಟಿ, ಪ್ರೇಮಾನಂದ ಶೆಟ್ಟಿ ಹಳ್ನಾಡು, ರಿತೇಶ್ ಶೆಟ್ಟಿ, ಕಾಳಿಂಗ ಶೆಟ್ಟಿ, ಭುಜಂಗ ಶೆಟ್ಟಿ ಮುಳ್ಳುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
ಇದರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್, ಶಾಸಕರಾದ ಕಿರಣ್‌ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ್ ಶೆಟ್ಟಿ ಅಲ್ಲದೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೂ ಮನವಿಗಳನ್ನು ಸಲ್ಲಿಸಲಾಗಿದೆ.