ಇಬ್ಬರು ವೃದ್ಧರು ಆತ್ಯಹತ್ಯೆ
ಉಡುಪಿ, ಅ.8: ವಯೋಸಹಜ ಕಾಯಿಲೆಯಿಂದ ಬಳಲುತಿದ್ದ ಬೈಲಕೆರೆಯ ಶ್ರೀಧರ ಐತಾಳ್ (71) ಎಂಬವರು ಇದರಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ಮುಂಜಾನೆ 2:00ಗಂಟೆ ಯಿಂದ 5:00ಗಂಟೆ ನಡುವಿನ ಅವಧಿಯಲ್ಲಿ ಮನೆಯ ಹಾಲ್‌ನಲ್ಲಿದ್ದ ಸೀಲಿಂಗ್ ಫ್ಯಾನ್‌ಗೆ ಪಂಚೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಉಡುಪಿ: ಕೊರಂಗ್ರಪಾಡಿ ಚರ್ಚ್ ಹಿಂಭಾಗದಲ್ಲಿರುವ ಮನೆ ಯೊಂದರಲ್ಲಿ 72 ವರ್ಷದ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಮೃತರನ್ನು ಪಡುಬೈಲೂರಿನ ಸೋಲೋಮನ್ ಫ್ರೆಡಿಕ್ಸ್ (72) ಎಂದು ಗುರುತಿಸಲಾಗಿದೆ. ಸಾಲಬಾಧೆಯಿಂದ ಅವರು ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಹೇಳಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತಿದ್ದಾರೆ.