ಉಡುಪಿ, ಅ.8: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಕ್ಷಿತಾ ನಾಯ್ಕ್ ಅವರ ಬಡ ಕುಟುಂಬಕ್ಕೆ ಹಿರಿಯಡಕದ ಬೊಮ್ಮರಬೆಟ್ಟುನಲ್ಲಿ, ಉಡುಪಿ ಗಾಂಧಿ ಆಸ್ಪತ್ರೆಯ ಸಂಸ್ಥಾಪಕ ಡಾ. ಹರಿಶ್ಚಂದ್ರ ಇವರು ತಮ್ಮ ಹೆತ್ತವರ ಸಂಸ್ಮರಣೆಯಲ್ಲಿ ನೂತನವಾಗಿ ನಿರ್ಮಿಸಿದ ‘ರಂಗ-ರುಕ್ಮಿಣಿ’ ಮನೆಯ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಉದಯ ನಾಯ್ಕ್ ಹಾಗೂ ಗೀತಾ ಇವರ ಪುತ್ರಿಯಾದ ಪ್ರತಿಭಾನ್ವಿತ ವಿದ್ಯಾರ್ಥಿನಿ ಅಕ್ಷಿತಾ ನಾಯ್ಕ್ ಕುಟುಂಬಕ್ಕೆ ಮನೆಯನ್ನು ಹಸ್ತಾಂತರಿಸಿ ಮಾತನಾಡಿದ ಡಾ.ಹರಿಶ್ಚಂದ್ರ, ತಂದೆಯವರ 105ನೇ ಜನ್ಮವರ್ಷದೊಂದಿಗೆ ತನ್ನ ಜನ್ಮದಿನ ಹಾಗೂ ವಿವಾಹವಾದ ದಿನವೂ ಇದಾಗಿದ್ದು, ಇದೇ ಸಂದರ್ಭದಲ್ಲಿ ಮನೆಯ ಪ್ರಾಯೋಜಕತ್ವ ವಹಿಸಿರುವುದು ನನ್ನ ಭಾಗ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ದಾನಿಗಳ ನೆರವಿನೊಂದಿಗೆ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಯೋಜನೆ ಉಳಿದವರಿಗೆ ಮಾದರಿಯಾಗಿದೆ ಎಂದರು. ಉದ್ಯಮಿ-ಸಮಾಜ ಸೇವಕ ಪಿ.ನಟರಾಜ ಹೆಗ್ಡೆ ಮಾತನಾಡಿ ಫಲಾನುಭವಿಗಳ ಆಯ್ಕೆಯಲ್ಲಿ ಕಲಾರಂಗ ಹಾಕಿಕೊಂಡಿರುವ ಮಾನದಂಡ ಅನುಕರಣೀಯ ಎಂದರು.

ಹಿರಿಯಡಕ ಕೆ.ಪಿ.ಎಸ್.ನ ಎಸ್‌ಡಿಎಂಸಿ ಉಪಾಧ್ಯಕ್ಷ ಬಿ. ಎಲ್. ವಿಶ್ವಾಸ್ ಮತ್ತು ಲಕ್ಷ್ಮೀ ಹರಿಶ್ಚಂದ್ರ ಶುಭ ಕೋರಿದರು. ವೇದಿಕೆಯಲ್ಲಿ ಡಾ. ಪಂಚಮಿ, ಎಂ.ದಾಮೋದರ ಭಟ್, ಎಂ.ಅನಂತ ಭಟ್, ಜಯಲಕ್ಷ್ಮೀ ತಂತ್ರಿ, ಶಕುಂತಲಾ ಐತಾಳ್, ಜಾಹ್ನವಿ ಭಟ್, ರಾಜೇಶ್ ಭಟ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಾ.ಹರಿಶ್ಚಂದ್ರ ದಂಪತಿಗಳನ್ನು ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾುತು. ಸಂಸ್ಥೆಯ ಉಪಾಧ್ಯಕ್ಷ ಪಿ. ಕಿಶನ್ ಹೆಗ್ಡೆ, ಕೋಶಾಧಿಕಾರಿ ಕೆ.ಸದಾಶಿವ ರಾವ್, ಸದಸ್ಯರಾದ ಯು.ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಯು. ಅನಂತರಾಜ ಉಪಾಧ್ಯ, ಮರ್ಣೆ ಉಮೇಶ್ ಭಟ್, ರಾಜೇಶ್ ಭಟ್ ಪಣಿಯಾಡಿ, ಶಾಲಾ ಆಡಳಿತ ಸಮಿತಿ ಸದಸ್ಯ ಅಶೋಕ್ ಜೋಗಿ, ಮುಖ್ಯೋಪಾಧ್ಯಾಯ ಪ್ರಕಾಶ್ ಪ್ರಭು ಭಾಗವಹಿಸಿದ್ದರು.

ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor