ಕಲಾಕೃತಿಗೆ ದಸರಾ ರಾಜ್ಯ ಪ್ರಶಸ್ತಿ
ಉಡುಪಿ, ಅ.10: ಮೈಸೂರು ದಸರಾ ಕಲಾಪ್ರದರ್ಶನದ ವೃತ್ತಿಪರ ಕಲಾವಿದರ ಪೈಟಿಂಗ್ ವಿಭಾಗದಲ್ಲಿ ಉಡುಪಿಯ ದೃಶ್ಯ ಕಲಾವಿದ ಹಾಗೂ ಉಡುಪಿ ಆರ್ಟಿಸ್ಟ್ಸ್ ಫೋರಂ ಕಾರ್ಯದರ್ಶಿ ಸಕು ಪಾಂಗಾಳ ಅವರ ಅಕ್ರಲಿಕ್ ಮಾಧ್ಯಮ ಕಲಾಕೃತಿಗೆ ಮತ್ತು ಸಾಂಪ್ರದಾಯಿಕ ಚಿತ್ರಕಲೆ ವೃತ್ತಿಪರ ವಿಭಾಗದಲ್ಲಿ ಉಡುಪಿ ಆರ್ಟಿಸ್ಟ್ಸ್ ಫೋರಂ ಸದಸ್ಯ ಜನಾರ್ದನ ಹಾವಂಜೆ ಅವರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ.
ಮೈಸೂರಿನ ಚಾಮರಾಜೇಂದ್ರ ಸರಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಅ.14ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಲಾಪ್ರದರ್ಶನ ಅ.11ರಿಂದ 24 ರ ತನಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.