ರೈಲಿನಿಂದ ಬಿದ್ದು ಯುವಕ ಮೃತ್ಯು
ಬ್ರಹ್ಮಾವರ, ನ.6: ಮಂಗಳ ಲಕ್ಷದೀಪ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳೂರಿ ನಿಂದ ಆಗ್ರಾ ಚಾವನಿಗೆ ಪ್ರಯಾಣಿಸು ತಿದ್ದ ಸುಮಾರು 35 ವರ್ಷ ಪ್ರಾಯದ ಅಪರಿಚಿತ ಪ್ರಯಾಣಿಕರೊಬ್ಬರು ನ.3ರ ಮಧ್ಯರಾತ್ರಿ 1:10ರ ಸುಮಾರಿಗೆ ಹನೆಹಳ್ಳಿ ಗ್ರಾಮದ ನೀಲಾವರ ರೈಲ್ವೆ ಹಳಿಯ ಬಳಿ ರೈಲಿನಿಂದ ಕೆಳಗೆ ಬಿದ್ದು, ತೀವ್ರವಾಗಿ ಗಾಯಗೊಂಡು ಉಡುಪಿ ಅಜ್ಜರಕಾಡಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಟಿಕೆಟ್ ನಂ.ಎಒಬಿ 60733048ಎ ಹೊಂದಿರುವ ಪ್ರಯಾಣಿಕರ ಯಾವುದೇ ಗುರುತು ಪತ್ತೆಯಾಗಿಲ್ಲ ಎಂದು ಉಡುಪಿ ರೈಲು ಸುರಕ್ಷಾ ಪಡೆಯ ಎಎಸ್‌ಐ ತಿಳಿಸಿದ್ದು, ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.