ಕಾಲು ಜಾರಿ ಬಿದ್ದು ಯುವಕ ಮೃತ್ಯು
ಬ್ರಹ್ಮಾವರ, ನ.11: ವೀಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ 33ನೇ ಶೀರೂರು ಗ್ರಾಮದ ಮೂಡುಗಡ್ಡೆ ನಿವಾಸಿ ಶೇಖರ(38) ಎಂಬವರು ನ.10ರಂದು ಬೆಳಗ್ಗೆ ಮನೆಯ ಎದುರು ನೀರು ತುಂಬಿಸಿಟ್ಟಿದ್ದ ಡ್ರಮ್ಮಿನಿಂದ ಕೊಡಪಾನದ ಮೂಲಕ ನೀರು ತೆಗೆದುಕೊಂಡು ಮೈಮೇಲೆ ಹಾಕಿಕೊಳ್ಳುತ್ತಿರುವಾಗ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.