ಸಾಂದರ್ಭಿಕ ಚಿತ್ರ

ಉಡುಪಿ, ನ.12: ಉಡುಪಿ ಪೇಟೆಗೆ ಹೋಗಿ ತರಕಾರಿ ತೆಗೆದುಕೊಂಡ ಮನೆಗೆ ವಾಪಾಸಾಗುತಿದ್ದ ಗೀತಾ ನಂಬಿಯಾರ್ (67) ಎಂಬವರು ಅಜ್ಜರಕಾಡ್ ವಾರ್ಡಿನ ಲಾಲ್‌ಬಹಾದೂರ್ ಶಾಸ್ತ್ರಿ ಮಾರ್ಗದ 2ನೇ ಕ್ರಾಸ್ ಬಳಿ ಉಡುಪಿ ಹೆರಿಟೇಜ್ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಬರುತಿದ್ದಾಗ ಸಂಜೆ 6:30ರ ಸುಮಾರಿಗೆ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಅವರ ಕುತ್ತಿಗೆಗೆ ಕೈಹಾಕಿ ಕೊರಳಿನಲ್ಲಿದ್ದ ಒಂದೂವರೆ ಪವನ್ ಲಕ್ಷ್ಮೀ ಪೆಂಡೆಂಟ್ ಇರುವ ಚಿನ್ನದ ಚೈನ್‌ನ್ನು ಬಲಾತ್ಕಾರವಾಗಿ ಸೆಳೆದುಕೊಂಡು ಹೋಗಿದ್ದು ಅದ ಮೌಲ್ಯ ಒಂದೂವರೆ ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor