ಕುಂದಾಪುರ ಯುವ ಕಾಂಗ್ರೆಸ್ನಿಂದ ಸಂಭ್ರಮಾಚರಣೆ
ಕುಂದಾಪುರ, ನ.21: ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರನ್ನು ಕರ್ನಾಟಕ ಸರ್ಕಾರದ ವಿಧಾನಪರಿಷತ್ ಮುಖ್ಯ ಸಚೇತಕರಾಗಿ ನೇಮಿಸಿರುವ ಮತ್ತು ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸಂಖ್ಯೆಯಲ್ಲಿ ಜಯಗಳಿಸಿರುವ ಹಿನ್ನೆಲೆ ಕುಂದಾಪುರ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಕುಂದಾಪುರ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಜಿತ್ ಪೂಜಾರಿ ಹೇರಿಕುದ್ರು, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ ಕಾಳವಾರ, ತಾಲೂಕು ಕೆಡಿಪಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಪುರಸಭಾ ನಿಕಟಪೂರ್ವ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಾಧಿಕಾರದ ಸದಸ್ಯ ಚಂದ್ರ ಅಮೀನ್, ಪುರಸಭೆ ನಾಮನಿರ್ದೇಶನ ಸದಸ್ಯ ಅಶೋಕ್ ಸುವರ್ಣ, ಆನಗಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸವಿತಾ ಬಿಲ್ಲವ, ಮಾಜಿ ಉಪಾಧ್ಯಕ್ಷೆ ಗೀತಾ ಎಸ್, ಹಂಗಳೂರು ಗ್ರಾಮ ಪಂಚಾಯತ್ ಸದಸ್ಯ ರೋಶನ್ ಬರೆಟ್ಟೋ, ಪ್ರಮುಖರಾದ ಸುನೀಲ ಪೂಜಾರಿ ಕೋಡಿ, ರವೀಂದ್ರ ನಾಯ್ಕ , ದಿವಾಕರ ಕುಲಾಲ್, ರವಿ ಕುಲಾಲ್, ಶಾರುಖ್ ಕೋಡಿ, ಸಾದೀಕ್ ಕೋಡಿ, ಸುಲೈಮಾನ್ ಕೋಡಿ, ಮುನಾಫ್ ಕೋಡಿ, ಪೈರುಶ್ ಗೋಪಾಡಿ, ರವೀಂದ್ರ ಶೆಟ್ಟಿ ಹೈಕಾಡಿ, ಅಜಯ್, ಅರ್ಮ, ಮನೋಜ್ ಕುಲಾಲ್ ಮೊದಲಾದವರಿದ್ದರು.