ಪಡಿತರ ಚೀಟಿಗೆ ಇ-ಕೆವೈಸಿ ಜೋಡಣೆ: ನ.30ರವರೆಗೆ ಅವಧಿ ವಿಸ್ತರಣೆ
ಉಡುಪಿ, ನ.21:ಜಿಲ್ಲೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯು ತ್ತಿರುವ ಆದ್ಯತಾ (ಬಿಪಿಎಲ್) ಮತ್ತು ಅಂತ್ಯೋದಯ (ಎಎವೈ) ಪಡಿತರ ಚೀಟಿಯಲ್ಲಿರುವ ಫಲಾನುಭವಿಗಳ ಮಾಹಿತಿಯನ್ನು ನವೀಕರಿಸುವ ಉದ್ದೇಶದಿಂದ ಇ-ಕೆವೈಸಿ ಮಾಡಿಸಿ 1 ವಷರ್ ಪೂರ್ಣಗೊಂಡಿರುವ ಮತ್ತು ಇ-ಕೆವೈಸಿ ಮಾಡಿಸಿ 5 ವರ್ಷ ಪೂರ್ಣಗೊಂಡಿರುವ ಪಡಿತರ ಚೀಟಿದಾರರು -ಎರಡೂ ವರ್ಗಗಳ ಪಡಿತರ ಚೀಟಿದಾರರು- ಕಡ್ಡಾಯವಾಗಿ ಮರು ಇ-ಕೆವೈಸಿ ಮಾಡಿಸಿ ಕೊಳ್ಳಬೇಕಾಗಿದೆ.
ಈ ಸಂಬಂಧ, ಜಿಲ್ಲೆಯಲ್ಲಿ 1 ವರ್ಷ ಪೂರೈಸಿರುವ ಒಟ್ಟು 2,70,204 ಫಲಾನುಭವಿಗಳ ಪೈಕಿ 27,708 ಫಲಾನು ಭವಿಗಳ ಇ-ಕೆವೈಸಿ ಪೂರ್ಣ ಗೊಂಡಿದ್ದು, ಇನ್ನೂ 2,42,496 ಫಲಾನುಭವಿಗಳ ಇ-ಕೆವೈಸಿ ಪ್ರಕ್ರಿಯೆ ಬಾಕಿ ಇರುತ್ತದೆ. ಅದೇ ರೀತಿ 5 ವರ್ಷ ಪೂರೈಸಿರುವ ಒಟ್ಟು 4,47,562 ಫಲಾನುಭವಿಗಳ ಪೈಕಿ 3,99,882 ಫಲಾನುಭವಿಗಳ ಇ-ಕೆವೈಸಿ ಪೂರ್ಣ ಗೊಂಡಿದ್ದು, ಇನ್ನೂ 47,680 ಫಲಾನುಭಗಳ ಇ-ಕೆವೈಸಿ ಪ್ರಕ್ರಿಯೆ ಬಾಕಿ ಉಳಿದಿದೆ.
ಬಾಕಿ ಉಳಿದಿರುವ ಎಲ್ಲಾ ಫಲಾನುಭವಿಗಳ ಇ-ಕೆವೈಸಿ ಮಾಡಿಸಲು ನವೆಂಬರ್ 30ರವರೆಗೆ ಕಾಲಾವಕಾಶ ನೀಡಲಾಗಿದ್ದು, ಫಲಾನುಭವಿಗಳು ತಮ್ಮ ಹತ್ತಿರದ ಯಾವುದೇ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಅಥವಾ ಅನ್ನಸೇವಾ ಆ್ಯಪ್ ಅನ್ನು ಮೊಬೈಲ್ನ ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಂಡು ಇ-ಕೆವೈಸಿಯನ್ನು ಮಾಡಿಕೊ ಳ್ಳಬಹುದಾಗಿದೆ. ಇದು ಸಂಪೂರ್ಣ ಉಚಿತವಾಗಿದ್ದು, ನಿಗದಿತ ಗಡುವಿನ ಒಳಗೆ ಇ-ಕೆವೈಸಿ ಪ್ರಕ್ರಿಯೆ ಯನ್ನು ಪೂರ್ಣಗೊಳಿಸಬೇಕು. ನಿಗದಿತ ಅವಧಿಯೊಳಗೆ ಇ-ಕೆವೈಸಿ ಮಾಡಿಸಿ ಕೊಳ್ಳದ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪಡಿತರ ವಿತರಣೆ ಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ಇ-ಕೆವೈಸಿ ಮಾಡಿಸದೇ ಇರುವ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ.
ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿ, ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಆಧಾರ್ ಕಾರ್ಡ್ನ್ನು ತೆಗೆದುಕೊಂಡು ಸಮೀಪದ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು ಎಂದು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.