×
Ad

ಕರಾವಳಿ ಜಿಲ್ಲೆಗಳಿಗೆ 2 ದಿನ ರೆಡ್ ಅಲರ್ಟ್: ಹವಾಮಾನ ಇಲಾಖೆ

Update: 2026-07-01 22:03 IST

ಉಡುಪಿ, ಜು.1: ಕಳೆದೆರಡು ದಿನಗಳಿಗೆ ಹೋಲಿಸಿದರೆ ಮಳೆಯ ವೇಗ ತಗ್ಗಿದ ಉಡುಪಿ ಜಿಲ್ಲೆಯೂ ಸೇರಿದಂತೆ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಿಗೆ ಗುರುವಾರ ಮತ್ತು ಶುಕ್ರವಾರ ರೆಡ್ ಅಲರ್ಟ್‌ನ್ನು ಹವಾಮಾನ ಇಲಾಖೆ ಘೋಷಿಸಿದೆ. ಈ ಅವಧಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದೆ.

ಎರಡು ದಿನ ಉತ್ತಮ ಮಳೆಯಾದ ಬಳಿಕ ಉಡುಪಿ ಜಿಲ್ಲೆಯಲ್ಲಿ ಇಂದು ಮಳೆಯ ಬಿರುಸು ತಗ್ಗಿತ್ತು. ದಿನದ ಹೆಚ್ಚಿನ ಹೊತ್ತು ಮಳೆ ವಿಶ್ರಾಂತಿಯನ್ನು ಪಡೆದಿದ್ದರೆ, ಸಂಜೆಯ ಬಳಿಕ ಮತ್ತೆ ಮಳೆ ಸುರಿಯಲಾರಂಭಿಸಿತ್ತು.

ಇಂದು ಬೆಳಗಿನ 8:30ರವರೆಗೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 75.5ಮಿ.ಮೀ. ಮಳೆಯಾ ಗಿದೆ. ಕಾಪುವಿನಲ್ಲಿ ಅತ್ಯಧಿಕ 114.5 ಮಿ.ಮೀ. ಮಳೆಯಾದರೆ, ಕಾರ್ಕಳದಲ್ಲಿ 88.8, ಬೈಂದೂರಿನಲ್ಲಿ 75.5, ಬ್ರಹ್ಮಾವರದಲ್ಲಿ 71.0, ಕುಂದಾಪುರದಲ್ಲಿ 68.7, ಉಡುಪಿಯಲ್ಲಿ 67.7 ಹಾಗೂ ಹೆಬ್ರಿಯಲ್ಲಿ 57.7ಮಿ.ಮೀ. ಮಳೆಯಾಗಿದೆ.

ಕುಂದಾಪುರ ತಾಲೂಕು ಹಕ್ಲಾಡಿ ಗ್ರಾಮದ ಯಳೂರು ನಿವಾಸಿ ಗಣಪಯ್ಯ ಶೆಟ್ಟಿ ಇವರ ವಾಸ್ತವ್ಯದ ಮನೆ ಮೇಲೆ ತೆಂಗಿನ ಮರ ಬಿದ್ದು ಭಾಗಶ: ಹಾನಿಯಾಗಿದ್ದು ಸುಮಾರು 30,000ರೂ. ನಷ್ಟದ ಅಂದಾಜು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News