ಎಸ್‌ಐಆರ್: ಉಡುಪಿ ಜಿಲ್ಲೆಯಲ್ಲಿ 2274 ನಮೂನೆ ಡಿಜಿಟಲೀಕರಣಕ್ಕೆ ಬಾಕಿ

Update: 2026-08-03 21:31 IST

ಉಡುಪಿ: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆದಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್-2026) ಪ್ರಕ್ರಿಯೆಯಲ್ಲಿ ಮತದಾರರು ಹಿಂದಿರುಗಿಸಿದ ಗಣತಿ ನಮೂನೆಗಳ ಡಿಜಿಟಲೀಕ ರಣ ಕಾರ್ಯ ಮುಗಿಯುವ ಹಂತಕ್ಕೆ ಬಂದಿದ್ದು, ಇನ್ನು ಕೇವಲ 2274 ಗಣತಿ ನಮೂನೆಗಳು ಮಾತ್ರ ಡಿಜಿಟಲೀಕ ರಣಕ್ಕೆ ಬಾಕಿ ಇದೆ ಎಂಬುದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದ ಅಂಕಿಅಂಶ ಗಳಿಂದ ಗೊತ್ತಾಗುತ್ತದೆ.

ಜಿಲ್ಲೆಯಲ್ಲಿ ಆ.3 ಸೋಮವಾರ ಸಂಜೆಯವರೆಗೆ ಒಟ್ಟು 10,63,876 ಮತದಾರರ ಪೈಕಿ 9,98,792 ಮತದಾರರ (ಶೇ.93.88) ಡಿಜಿಟಲೀಕರಣ ಪೂರ್ಣಗೊಂಡಿದೆ. ಕೇವಲ 2274 ಗಣತಿ ನಮೂನೆಗಳ ಡಿಜಿಟಲೀಕರಣಕ್ಕೆ ಬಾಕಿ ಉಳಿದಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 62,810 (ಶೇ.5.93) ಮಂದಿ ಮತದಾರರ ಪಟ್ಟಿಯಿಂದ ಹೊರಬಿದ್ದಿದ್ದಾರೆ ಎಂದು ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಅಂಕಿಅಂಶಗಳು ಹೇಳುತ್ತವೆ.

ಇವರಲ್ಲಿ ಈ ವರೆಗೆ 21,072 ಮಂದಿ ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಗೊತ್ತಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ 29,150 ಮಂದಿ ಮತದಾರರು ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆ ಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 8191 ಮಂದಿ ಮತದಾರರು ಆನ್‌ಲೈನ್ ಮೂಲಕ ನೊಂದಣಿಯನ್ನು ಮಾಡಿದ್ದಾರೆ. 4191 ಮಂದಿ ಪತ್ತೆಯಾಗಿಲ್ಲ ಎಂದೂ ಮಾಹಿತಿ ತಿಳಿಸುತ್ತದೆ.

1013 ಮತಗಟ್ಟೆಗಳಲ್ಲಿ ಶೇ.100 ಸಾಧನೆ: ಉಡುಪಿ ಜಿಲ್ಲೆಯಲ್ಲಿ ಶೇ.100ರಷ್ಟು ಡಿಜಿಟಲೀಕರಣ ಹಾಗೂ ಎಎಸ್‌ಡಿಡಿ (ಗೈರು, ವರ್ಗಾವಣೆ, ಮೃತ, ತೆಗೆದುಹಾಕಿದ), ಡಿಎಸ್‌ಇ ಹಾಗೂ ಪಿಎಸ್‌ಇ ಪರಿಶೀಲನೆ ಪೂರ್ಣ ಗೊಳಿಸಿರುವ ಮತಗಟ್ಟೆಗಳ ಸಂಖ್ಯೆ 1013ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಶೇ.100ರಷ್ಟು ಪ್ರಕ್ರಿಯೆ ಪೂರ್ಣಗೊಂಡ ಮತಗಟ್ಟೆಗಳ ಸಂಖ್ಯೆ ಹೀಗಿದೆ. ಬೈಂದೂರು ಕ್ಷೇತ್ರ-224 ಮತಗಟ್ಟೆ, ಕುಂದಾಪುರ-222, ಉಡುಪಿ-150, ಕಾಪು- 208, ಕಾರ್ಕಳ- 209, ಒಟ್ಟು- 1013.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News