ಮನೆಗೆ ನುಗ್ಗಿ ಕಳವು
Update: 2023-08-22 21:31 IST
ಮಣಿಪಾಲ, ಆ.22: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಮಣಿಪಾಲ ಈಶ್ವರನಗರ ಎಂಬಲ್ಲಿ ಆ.20ರಂದು ಸಂಜೆ ವೇಳೆ ನಡೆದಿದೆ.
ರಿಶಾಂಕ್ ಕಮ್ರ ಎಂಬವರ ಮನೆಗೆ ಬಾದಲ್ ಎಂಬಾತ ನುಗ್ಗಿ, ಮೊಬೈಲ್ ಪೋನ್, ಚಾರ್ಜರ್ ಮತ್ತು ಸ್ಪೀಕರ್ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯದ 59,800ರೂ. ಎಂದು ಅಂದಾಜಿಸ ಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.