×
Ad

ಉಡುಪಿ: ಸಾಧಕರಿಗೆ, ನಾಮನಿರ್ದೇಶಿತ ಒಕ್ಕೂಟದ ಸದಸ್ಯರಿಗೆ ಸನ್ಮಾನ

Update: 2025-02-17 18:03 IST

ಉಡುಪಿ: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆಯ ವತಿಯಿಂದ ಸಾಧಕರಿಗೆ ಸನ್ಮಾನ ಹಾಗೂ ಕರ್ನಾಟಕ ಸರಕಾರದಿಂದ ನಾಮನಿರ್ದೇಶನ ಗೊಂಡ ಒಕ್ಕೂಟದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಇತ್ತೀಚೆಗೆ ಉಡುಪಿ ನೇಜಾರಿನ ವೈಟ್ ಕಾಟೇಜ್‌ನಲ್ಲಿ ಆಯೋಜಿಸಲಾಗಿತ್ತು.

ಜಿಲ್ಲಾ ಸಮಿತಿಯ ಮಾಸಿಕ ಸಭೆಯಲ್ಲಿ ಸಮುದಾಯದ ಸಾಧಕರಾದ ಸಾಹಿತಿ ಇರ್ಷಾದ್ ಮೂಡಬಿದರೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಮುಸ್ತಾಕ್ ಹೆನ್ನಾಬೈಲ್, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಹಮ್ಜತ್ ಅಬ್ದುಲ್ ರಹಿಮಾನ್, ಸಮಿತಿ ಸದಸ್ಯರಾದ ಮನ್ಸೂರ್ ಇಬ್ರಾಹಿಂ ಮರವಂತೆ, ಹಮೀದ್ ಯುಸೂಫ್ ಮೂಳೂರ್, ತಾಲೂಕು ಮಟ್ಟದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಝಹೀರ್ ಅಹಮೆದ್ ನಾಖುದಾ, ಮುಕ್ರಿ ಮೊಹಮ್ಮದ್ ಅಲ್ತಾಫ್, ಉಸ್ತಾದ್ ಸಾದಿಕ್ ಹೂಡೆ, ಕುಂದಾಪುರ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿ ಸದಸ್ಯ ಖಲೀಫೆ ಅಬ್ದುಲ್ ಮುನಾಫ್, ಕುಂದಾಪುರ ತಾಲೂಕು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಮೊಹಮ್ಮದ್ ಅಲ್ಫಾಜ್, ಕಾಪು ತಾಲೂಕು ನಗರ ಯೋಜನಾ ಪ್ರಾಧಿಕಾರ ಸಮಿತಿ ಸದಸ್ಯ ಮೊಹಮ್ಮದ್ ಸಾದಿಕ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹೀರ್ ನಾಖುದಾ ಗಂಗೊಳ್ಳಿ, ಜಿಲ್ಲಾ ಖಜಾಂಜಿ ನಕ್ವಾ ಯಾಹ್ಯಾ, ಸೆಂಟ್ರಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಝಮೀರ್ ಅಹ್ಮದ್ ರಷಾದಿ, ಸೆಂಟ್ರಲ್ ಸಮಿತಿಯ ಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಸಲೀಂ, ಟ್ರಸ್ಟಿಗಳಾದ ಶಬ್ಬೀರ್ ಕಾರ್ಕಳ, ಮೊಹಸಿನ್ ಕಾರ್ಕಳ ಉಪಸ್ಥಿತರಿದ್ದರು.

ನಮ್ಮ ನಾಡ ಒಕ್ಕೂಟ ತಾಲೂಕು ಅಧ್ಯಕ್ಷರಾದ ಎ.ನಜೀರ್ ಸಾಹೇಬ್ ಉಡುಪಿ, ದಸ್ತಗೀರ್ ಸಾಹೇಬ್ ಕುಂದಾಪುರ, ಮುಹಮ್ಮದ್ ರಫೀಕ್ ಹೆಬ್ರಿ, ತಾಜುದ್ದೀನ್ ಇಬ್ರಾಹಿಂ ಬ್ರಹ್ಮಾವರ, ಅಶ್ರಫ್ ಕಾಪು ಹಾಗೂ ಹುಸೇನ್ ಹೈಕಾಡಿ ಉಪಸ್ಥಿತರಿದ್ದರು. ಅಶಕ್ತರಿಗೆ ಸಾಸ್ತಾನದ ಹರೂನ್ ರಶೀದ್ ಧನ ಸಹಾಯ ನೆರವು ನೀಡಿದರು.

ಫಾಝಿಲ್ ಆದಿ ಉಡುಪಿ ಸ್ವಾಗತಿಸಿದರು, ಅಬ್ಬು ಮೊಹಮ್ಮದ್ ಕುಂದಾಪುರ ವಂದಿಸಿದರು. ಫಝಲ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News