×
Ad

ಬೈಂದೂರು: ಚಿಕ್ತಾಡಿ ಬಳಿ ಮತ್ತೊಂದು ಚಿರತೆ ಬೋನಿಗೆ

Update: 2026-01-22 19:47 IST

ಬೈಂದೂರು, ಜ.22: ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ತಾಡಿ ಎಂಬಲ್ಲಿ ಒಂದು ವಾರದ ಅಂತರದಲ್ಲಿ ಎರಡನೇ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.

ಜ.16ರಂದು ಹೇರೂರು ಗ್ರಾಮದ ಚಿಕ್ತಾಡಿ ಎಂಬಲ್ಲಿರುವ ಖಾಸಗಿ ತೋಟದಲ್ಲಿ ಇಲಾಖೆಯಿಟ್ಟ ಬೋನಿಗೆ ಅಂದಾಜು 3 ವರ್ಷ ಪ್ರಾಯದ ಹೆಣ್ಣು ಚಿರತೆ ಬಿದ್ದಿದ್ದು ಅದನ್ನು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿತ್ತು. ಚಿರತೆಗಳ ಓಡಾಟದ ಬಗ್ಗೆ ಸಾರ್ವಜನಿಕರಿಂದ ಮತ್ತೆ ದೂರುಗಳು ಬಂದ ಹಿನ್ನೆಲೆ ಅರಣ್ಯಾಧಿಕಾರಿಗಳು ಅದೇ ಸ್ಥಳದಲ್ಲಿ ಮತ್ತೆ ಬೋನು ಇರಿಸಿದ್ದು ಜ.22ರಂದು ಬೆಳಗ್ಗೆ ಮತ್ತೊಂದು ಚಿರತೆ ಸೆರೆಯಾಗಿದೆ. ಈ ಮೂಲಕ ಆರು ದಿನಗಳ ಅಂತರದಲ್ಲಿ 2 ಚಿರತೆಗಳು ಬೋನಿಗೆ ಬಿದ್ದಿವೆ.

ಸ್ಥಳಕ್ಕೆ ಬೈಂದೂರು ವಲಯ ಅರಣ್ಯಾಧಿಕಾರಿ ಜ್ಯೋತಿ ಸಂದೇಶ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ಕೆ. ಸದಾಶಿವ, ಗಸ್ತು ಅರಣ್ಯ ಪಾಲಕರಾದ ಶೃತಿ ಗೌಡ, ಮಂಜುನಾಥ, ರಾಜೇಶ್, ಅರಣ್ಯ ವೀಕ್ಷಕ ಸುರೇಶ್ ಗೌಡ ಸ್ಥಳಕ್ಕೆ ಭೇಟಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News