×
Ad

ಚಂದ್ರಗೌಡ ಗೋಳಿಕೆರೆಗೆ ಎಂ.ಎಂ.ಹೆಗ್ಡೆ ಪ್ರಶಸ್ತಿ

Update: 2026-01-09 21:07 IST

ಉಡುಪಿ, ಜ.9: ಕುಂದಾಪುರದ ನ್ಯಾಯವಾದಿ ಎಂ. ಎಂ. ಹೆಗ್ಡೆ ಪ್ರತಿಷ್ಠಾನ ಕೊಡಮಾಡುವ 2026ನೇ ಸಾಲಿನ ಎಂ.ಎಂ.ಹೆಗ್ಡೆ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಚಂದ್ರಗೌಡ ಗೋಳಿಕೆರೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 10,000 ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ಜ.25ರಂದು ನಡೆಯುವ ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರದಾನ ಮಾಡಲಾಗು ವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ ತಾಲೂಕಿನ ಇಡೂರುಕುಂಞ್ಞಡಿ ಗೋಳಿಕೆರೆ ಎಂಬಲ್ಲಿ ಜನಿಸಿದ ಚಂದ್ರಗೌಡರು ಬಾಲ್ಯದಲ್ಲೇ ಯಕ್ಷಗಾನ ದತ್ತ ಆಕರ್ಷಿತರಾಗಿ ಐದನೇ ತರಗತಿಯಲ್ಲಿರುವಾಗ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ನೀಡಿ ಕಮಲಶಿಲೆ ಮಹಾಬಲ ದೇವಾಡಿಗರಿಂದ ಯಕ್ಷಗಾನ ಶಿಕ್ಷಣ ಪಡೆದು ಮಾರಣಕಟ್ಟೆ ಮೇಳಕ್ಕೆ ಪಾದಾರ್ಪಣೆ ಮಾಡಿದ್ದರು.

ಬಳಿಕ ಹಾಲಾಡಿ ಮೇಳದಲ್ಲಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ತಮ್ಮ ಕಲಾಸೇವೆ ಮುಂದುವರಿಸಿದ್ದಾರೆ. ಗತ್ತು-ಗಾಂಭೀರ್ಯದ ರಂಗನಡೆ, ಮುಖದಲ್ಲಿ ರಾಜಕಳೆ ಹಾಗೂ ಶ್ರುತಿಬದ್ಧ ಮಾತುಗಾರಿಕೆ ಯಿಂದ ರಂಗಸ್ಥಳದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಕಂಸ, ಹಿರಣ್ಯಕಶಿಪು, ರಾವಣ, ಕರ್ಣ, ಆಂಜನೇಯ, ಕೌರವ, ಭಸ್ಮಾಸುರ ಮೂಕಾಸುರ, ಆಂಜನೇಯ ಮುಂತಾದ ಪಾತ್ರಗಳಿಂದ ಇವರು ಪ್ರಸಿದ್ಧರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News